
ನಕಲಿ ಶಿಶ್ನ ಅಂಟಿಸಿಕೊಂಡು ಕೊಕೇನ್ ಮಾದಕ ದ್ರವ್ಯ ಸಾಗಿಸುತ್ತಿದ್ದ ಬ್ರಿಟನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಲ್ಜಿಯಂನಿಂದ ಜಮೈಕಾಕ್ಕೆ ಈತ ಪ್ರಯಾಣ ಬೆಳೆಸಿದ್ದ.
ಅನುಮಾನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು ಮಾದಕ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಆತನ ನಕಲಿ ಶಿಶ್ನದಲ್ಲಿ 127 ಗ್ರಾಂ ಕೊಕೇನ್ ಇಟ್ಟುಕೊಂಡಿರುವುದು ಬೆಳಕಿಗೆ ಬಂತು ಎಂದು ದ ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.
ಆತ ಯಾವುದೇ ಮಾದಕ ದ್ರವ್ಯ ಸಾಗಣೆ ಜಾಲಕ್ಕೆ ಒಳಪಟ್ಟಿಲ್ಲ. ಜಮೈಕಾಕ್ಕೆ ತನ್ನ ತಾಯಿಯನ್ನು ನೋಡಲು ತೆರಳುವಾಗ ತನ್ನ ಸ್ವಂತ ಬಳಕೆಗಾಗಿ, ಸ್ನೇಹಿತನಿಂದ ಪಡೆದು ಕೊಂಡೊಯ್ಯುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
36 ತಿಂಗಳ ಜೈಲು ಶಿಕ್ಷೆ ನೀಡುವಂತೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲೆ ಮನವಿ ಮಾಡಿದ್ದಾರೆ. ಆದರೆ, ಆತನ ಆರೋಗ್ಯ ಸ್ಥಿತಿ ಸರಿ ಇಲ್ಲ. ಶಿಕ್ಷೆ ಕಡಿಮೆ ಮಾಡಬೇಕು ಎಂದು ವಿನಂತಿಸಿದ್ದಾರೆ ಆತನ ಪರ ವಕೀಲರು.