ತನ್ನ ಎಂದಿನ ಕೆಲಸದಲ್ಲಿ ನಿರತರಾಗಿದ್ದ ಬ್ರಿಟನ್‌ನ ಲೋಹ ಪತ್ತೆದಾರ ಮಾರ್ಕ್ ವಿಲಿಯಮ್ಸ್‌ಗೆ ಎರಡನೇ ವಿಶ್ವ ಮಹಾಯುದ್ಧದ ಕಾಲದ ಜೀವಂತ ಬಾಂಬ್ ಒಂದು ಸಿಕ್ಕಿದೆ.
ಹ್ಯಾಂಪ್‌ಶೈರ್‌ನ ಸ್ವೇಯ್ಥ್‌ಲಿಂಗ್ ಎಂಬ ಊರಿನಲ್ಲಿರುವ ತಮ್ಮ ಸಹೋದರನ ಮನೆಯ ಬಳಿ ಇರುವ ಹುಲ್ಲುಹಾಸಿನ ಮೇಲೆ ಈ ಬಾಂಬ್ ಪತ್ತೆಯಾಗಿದೆ. ಈ ಬಾಂಬ್ ಅನ್ನು ವಿಂಟೇಜ್ ಪೀಸ್ ಆಗಿ ಇ-ಬೇನಲ್ಲಿ ಮಾರಾಟಕ್ಕೆ ಇಡಲು ಮಾರ್ಕ್ ಮುಂದಾಗಿದ್ದಾರೆ.
’’ದ್ವಿತೀಯ ವಿಶ್ವ ಮಹಾಯುದ್ಧ ಕಾಲದ ಜರ್ಮನ್ ಬಾಂಬ್ – ಅಸಲಿ ಸೌಂಥಾಂಪ್ಟನ್ ಬ್ಲಿಟ್ಜ್” ಎಂದು ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಕ್ಯಾಪ್ಷನ್ ಕೊಟ್ಟಿದ್ದಾರೆ ಮಾರ್ಕ್. ಆದರೆ ಆ ಬಾಂಬ್ ಸಜೀವವಾದದ್ದು ಹಾಗೂ ಅಕಸ್ಮಾತ್ ಸ್ಫೋಟಗೊಂಡರೆ ಮನೆಗಳನ್ನೇ ಹೊತ್ತಿ ಉರಿಸಬಲ್ಲದು ಎಂದು ಮಾರ್ಕ್‌ಗೆ ತಿಳಿದಿರಲಿಲ್ಲ.
42 ಸಾವಿರ ಬೆಲೆಯ ಈ ಎಲೆಕ್ಟ್ರಿಕ್ ವಾಹನದ ವಿಶೇಷತೆ ಏನು ಗೊತ್ತಾ….?
ಇಬೇನಲ್ಲಿ ಈ ಪೋಸ್ಟ್ ನೋಡಿದ ಮಿಲಿಟೇರಿಯಾದ ಕಲೆಕ್ಟರ್ ರಾಲ್ಫ್ ಶೆರ್ವಿನ್ ಈ ಬಾಂಬ್ ಇನ್ನೂ ಸಜೀವವಾಗಿದೆ ಎಂದು ಅರಿತೊಡನೆಯೇ ಸಂಬಂಧಪಟ್ಟ ಮಂದಿಯನ್ನು ಎಚ್ಚರಿಸಿದ್ದಾರೆ. ಕೂಡಲೇ ಮಾರ್ಕ್‌ಗೆ ಮೆಸೇಜ್ ಮಾಡಿದ ರಾಲ್ಫ್, ಆ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿಲ್ಲವೆಂದು ತಿಳಿಸಿದ್ದಾರೆ. ಹೀಗೆಲ್ಲಾ ಸಜೀವ ಬಾಂಬ್ ಅನ್ನು ಮಾರಾಟ ಮಾಡಬಾರದು ಎಂಬ ರಾಲ್ಫ್ ಮಾತಿಗೆ ಮಾರ್ಕ್ ಮೊದಲಿಗೆ ಬೆಲೆ ಕೊಡಲಿಲ್ಲ.
ಈ ವಿಚಾರವನ್ನು ಪೊಲೀಸರ ಗಮನಕ್ಕೆ ರಾಲ್ಫ್ ತಂದಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಮಾರ್ಕ್ ಮನೆ ಸುತ್ತ 50 ಮೀಟರ್ ಜಾಗವನ್ನು ನಿಷೇಧಿತ ಪ್ರದೇಶವನ್ನಾಗಿಸಿ, ತಜ್ಞರ ಸಹಾಯದಿಂದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.
ತಮ್ಮ ಪೋರ್ಟಲ್ ಮೂಲಕ ಸಜೀವ ಬಾಂಬ್ ಮಾರಾಟಕ್ಕಿಟ್ಟ ವಿಚಾರ ತಿಳಿಯುತ್ತಲೇ ಎಚ್ಚೆತ್ತ ಇಬೇ ವ್ಯವಸ್ಥಾಪಕರು ಮಾರ್ಕ್‌ರ ವಿಳಾಸವನ್ನು ಪತ್ತೆ ಮಾಡಲು ಪೊಲೀಸರಿಗೆ ನೆರವಾಗಿದ್ದಾರೆ.