ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್’ ಎಂದು ಹೆಸರಿಡಲು ಮುಂದಾದ ಬ್ರಿಟನ್ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ.
ತಮ್ಮ ನಾಲ್ಕು ತಿಂಗಳ ಮಗನಿಗೆ ಹೆಸರು ನೋಂದಣಿ ಮಾಡಲೆಂದು ಡ್ಯಾನ್ ಹಾಗೂ ಮಂಡಿ ಶೆಲ್ಡನ್ ದಂಪತಿಗಳು ರಿಜಿಸ್ಟ್ರಾರ್ ಕಾರ್ಯಾಲಯಕ್ಕೆ ಹೋಗಿದ್ದರು. ತಮ್ಮ ಮಗನಿಗೆ ಲೂಸಿಫರ್ ಶೆಲ್ಡನ್ ಎಂದು ಹೆಸರಿಡಲು ದಂಪತಿ ಉತ್ಸುಕವಾಗಿತ್ತು. ಆದರೆ, ಈ ಹೆಸರಿಗೆ ಸಾಕಷ್ಟು ಋಣಾತ್ಮಕ ಸಂಗತಿಗಳು ಅಂಟಿಕೊಂಡ ಪರಿಣಾಮ ಆ ಹೆಸರು ಅಪಶಕುನ ತರುವುದೆಂದು ನೋಂದಣಿ ಅಧಿಕಾರಿ ದಂಪತಿಗೆ ತಿಳಿಸಿದ್ದಾರೆ.
ಆದರೆ, ಗ್ರೀಕ್ ಭಾಷೆಯಲ್ಲಿ ಲೂಸಿಫರ್ ಎಂದರೆ ಬೆಳಕು ತರುವವ ಹಾಗೂ ಸೂರ್ಯಾಸ್ತ ಎಂಬ ಅರ್ಥವಿದ್ದು, ತಾವು ಅಂಥ ಧಾರ್ಮಿಕ ಮಂದಿಯಲ್ಲ ಎಂದು ದಂಪತಿಗಳು ಸ್ಪಷ್ಟನೆ ನೀಡಿದ್ದಾರೆ. ಬಳಿಕ ಈ ಹೆಸರಿಗೆ ರಿಜಿಸ್ಟ್ರಾರ್‌ರಿಂದ ಒಪ್ಪಿಗೆ ಸಿಕ್ಕಿದೆ.