
ಲಂಡನ್: ಬ್ರಿಟಿಷ್ ಆಹಾರೋದ್ಯಮ ಕಂಪನಿಯೊಂದು ವಿಶ್ವದ ಅತೀ ಉದ್ದದ ಪಫ್ ಕಾರ್ನ್ ತಯಾರಿಸಿ ವಿಶ್ವ ದಾಖಲೆ ಬರೆದಿದೆ.
ವಾಲ್ಕರ್ರ್ಸ್ ಕ್ರಿಸ್ಪ್ ಎಂಬ ಕಂಪನಿ ಹಲವು ಕುರುಕಲು ತಿಂಡಿಗಳನ್ನು ತಯಾರಿಸುತ್ತದೆ. ಈಗ ಅರ್ಧ ಕ್ರಿಕೆಟ್ ಪಿಚ್ ನಷ್ಟು ಉದ್ದದ ಅಂದರೆ, 10.66 ಮೀಟರ್ ಉದ್ದದ ಪಫ್ ಕಾರ್ನ್ ತಯಾರಿಸಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಗಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಶ್ವದ ಅತಿ ಉದ್ದದ ಪಫ್ ಕಾರ್ನ್ ತಯಾರಿಸುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ತಿಂಡಿಗೆ ವಟ್ ಸಿಟ್ ಎಂದು ಕಂಪನಿ ಹೆಸರಿಟ್ಟಿದೆ.