alex Certify ಲಾಕ್ ​ಡೌನ್​​ ನಿಯಮ ಉಲ್ಲಂಘಿಸಿದ ಪಾದ್ರಿಗೆ ಭಾರೀ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ​ಡೌನ್​​ ನಿಯಮ ಉಲ್ಲಂಘಿಸಿದ ಪಾದ್ರಿಗೆ ಭಾರೀ ದಂಡ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಹಿನ್ನೆಲೆ ಯುಕೆಯ ಕ್ಯಾಥೋಲಿಕ್​ ಚರ್ಚ್ ಪಾದ್ರಿಗೆ 1000 ಡಾಲರ್​​​ ದಂಡ ವಿಧಿಸಲಾಗಿದೆ. ಲಾಕ್​ಡೌನ್​ ನಿಯಮದ ಅನ್ವಯ ಮದುವೆಗೆ ಕೇವಲ 15 ಮಂದಿ ಹಾಜರಾಗುವಂತೆ ನಿರ್ಬಂಧ ಹೇರಲಾಗಿದೆಯಾದರೂ ಚರ್ಚ್​ನಲ್ಲಿ ಮದುವೆಗೆ 200 ಮಂದಿ ಹಾಜರಾಗಿದ್ದರು.

ಯುಕೆಯಲ್ಲಿ ಲಾಕ್​ಡೌನ್​ 2.0 ಜಾರಿಯಾಗೋಕೆ ಎರಡು ದಿನ ಮುನ್ನ ಅಂದರೆ ನವೆಂಬರ್​ ಮೂರರಂದು ಈ ವಿವಾಹ ನಡೆದಿದೆ. ಎರಡನೇ ಹಂತದ ಲಾಕ್​ಡೌನ್​ ಜಾರಿಗೂ ಮುನ್ನವೂ ಮದುವೆ ಸಮಾರಂಭಕ್ಕೆ 15 ಜನರ ಉಪಸ್ಥಿತಿಗಷ್ಟೇ ಸರ್ಕಾರ ಅವಕಾಶ ನೀಡಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಚರ್ಚ್​ ಪಾದ್ರಿ, ನಾವು ಮದುವೆಗೆ 15 ಜನ ಹಾಜರಾಗುತ್ತಾರೆ ಎಂದು ಊಹಿಸಿದ್ದೆವು. ಆದರೆ ಮದುಮಗಳು ಬಂದ ಬಳಿಕವೇ ಮದುವೆಯಲ್ಲಿ ಹೆಚ್ಚು ಜನ ಇದ್ದಾರೆ ಎಂಬುದು ಅರಿವಿಗೆ ಬಂತು ಅಂತಾ ಹೇಳಿದ್ದಾರೆ.

ನಾವು ಈ ಸಮಾರಂಭ ಮುಗಿಸುತ್ತಿದ್ದಂತೆಯೇ ಪೊಲೀಸರು ಚರ್ಚ್​ಗೆ ಬಂದಿದ್ದಾರೆ. ಆ ಹೊತ್ತಿಗಾಗಲೇ ಅತಿಥಿಗಳು ಚರ್ಚ್​ನಿಂದ ಹೊರಟಿಹೋಗಿದ್ದರು. ಪೊಲೀಸರು ಆ ಕ್ಷಣದಲ್ಲಿ ಯಾವುದೇ ದಾಖಲೆಯನ್ನ ನೀಡಿಲ್ಲ. ಆದರೆ ಸಮನ್ಸ್ ನೀಡಬಹುದು ಅಂತಾ ಹೇಳಿದ್ದಾರೆ, ಆದರೆ ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಹಣ ಪಾವತಿಸಬೇಕಾಗಿ ಬರಬಹುದು ಅಂತಾ ಹೇಳಿದ್ರು.

ಚರ್ಚ್​ನ್ನ ಕೋವಿಡ್​​ನಿಂದ ಬಚಾವು ಮಾಡಬೇಕು ಅಂತಾ ಇಷ್ಟು ದಿನಗಳಿಂದ ಶ್ರಮ ಪಡುತ್ತಿದ್ದೆ . ಆದರೆ ಈಗ ನನ್ನಿಂದಲೇ ತಪ್ಪು ನಡೆದು ಹೋಗಿದೆ ಅಂತಾ ಬೇಸರ ಹೊರಹಾಕಿದ್ದಾರೆ ಪಾದ್ರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...