ಯುಎಫ್ಓ (ಗುರುತಿಸಲಾಗದ ಹಾರುವ ವಸ್ತು) ಬಗ್ಗೆ ಜಗತ್ತಿಗೆ ಒಂದು ಕುತೂಹಲ ಇದ್ದೇ ಇದೆ. ಇದೀಗ ಅಮೆರಿಕ ನೌಕಾಪಡೆ ಹಡಗು ನೀರಿಗೆ ಇಳಿಯುವ ಮೊದಲು ಗುರುತಿಸಿರುವ ವಿಡಿಯೋ ವೈರಲ್ ಆಗಿದೆ
ಈ ವಿಡಿಯೋವನ್ನು ಸ್ಯಾನ್ ಡಿಯಾಗೋ ತೀರದಲ್ಲಿರುವ ಯುಎಸ್ಎಸ್ ಒಮಾಹಾದ ಯುದ್ಧ ಮಾಹಿತಿ ಕೇಂದ್ರದಲ್ಲಿ (ಸಿಐಸಿ) ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ನೌಕಾಪಡೆಯ ಹಡಗಿನ ಬಳಿ ಯುಎಫ್‌ಒ ವೇಗದಲ್ಲಿ ಹಾರುವ ಮತ್ತು ಕಣ್ಮರೆಯಾಗುವುದನ್ನು ಗುರುತಿಸಲಾಗಿದೆ.
ಚಿತೆಗೆ ಬೆಂಕಿ ಹಚ್ಚುವ ವೇಳೆ ಎದ್ದು ಕುಳಿತ ಕೊರೊನಾ ಸೋಂಕಿತ ಮಹಿಳೆ…!
ಅಂದಹಾಗೆ ಈ ವಿಡಿಯೋ 2019ರ ಜುಲೈನಲ್ಲಿ ತೆಗೆದಿದ್ದಾಗಿದೆ. ಚಲನಚಿತ್ರ ನಿರ್ಮಾಪಕ ಜೆರೆಮಿ ಕಾರ್ಬೆಲ್ ಅವರು ಮೇ 14ರಂದು ಜಾಲತಾಣದಲ್ಲಿ ಹಂಚಿಕೊಂಡ ನಂತರ ಜನರ ಗಮನಸೆಳೆದಿದೆ.
ಕ್ಲಿಪ್‌ನಲ್ಲಿರುವ ವಿಡಿಯೋ ವಿಶ್ಲೇಷಿಸಲಾಗಿದ್ದು, ಆ ಯುಎಫ್‌ಒ ಕನಿಷ್ಠ 6 ಅಡಿ ವ್ಯಾಸ ಹೊಂದಿದೆ ಮತ್ತು ಕಣ್ಮರೆಯಾಗುವ ಮೊದಲು 46-158 ಮೈಲು ವೇಗದಲ್ಲಿ ವೇಗದಲ್ಲಿ ಚಲಿಸಿದೆ ಎಂದು ವರದಿಗಳು ತಿಳಿಸಿವೆ.
https://www.youtube.com/watch?v=TbKosJEJ-d8