ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೊರೊನಾ ವೈರಸ್ ನಿರೋಧಕ ಲಸಿಕೆಯ ತುರ್ತು ದೃಢೀಕರಣ ಮಾಡಿದ್ದು, ಅತೀ ಅಪಾಯಕಾರಿ ಕಾರ್ಯದಲ್ಲಿ ತೊಡಗುವ ಕೆಲಸಗಾರರಿಗೆ ಬಳಸಲು ಅನುಮೋದಿಸಿದೆ.
ಈ ಸಂಬಂಧ ಟ್ವೀಟ್ ಮಾಡಿದ್ದು, ಮೊದಲು ರಕ್ಷಣಾ ಕಾರ್ಯದಲ್ಲಿರುವವರಿಗೆ ಡೋಸ್ ನೀಡಲಾಗುತ್ತದೆ.
ಪ್ರಯೋಗಗಳ ಸಮಯದಲ್ಲಿ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದ್ದು ಮತ್ತು ಯಾವುದೇ ಹಾನಿಕಾರಕ ಅಡ್ಡಪರಿಣಾಮ ಕಾಣಿಸಿಲ್ಲ ಎಂದು ಯುಎಇ ಸರ್ಕಾರ ತಿಳಿಸಿದೆ. ಲಸಿಕೆ ಇನ್ನೂ ಹಂತ -3 ನೇ ಹಂತದ ಪ್ರಯೋಗದಲ್ಲಿದೆ. ವಿಶ್ವದಾದ್ಯಂತ 170 ಕ್ಕೂ ಹೆಚ್ಚು ಲಸಿಕೆಗಳು ಅಭಿವೃದ್ಧಿಯಲ್ಲಿವೆ, ಅವುಗಳಲ್ಲಿ ಕೆಲವು ಮಾತ್ರ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿವೆ.