ತಾಯಿಯಾಗೋದು ಅಂದರೆ ಸುಲಭದ ವಿಚಾರವಲ್ಲ. ಇದೇ ರೀತಿ ಅಮೆರಿಕದಲ್ಲಿ ಮಗಳಿಗೆ ತಾಯಿಯಾಗೋದು ಕಷ್ಟವಿದೆ ಎಂಬುದನ್ನ ಅರಿತ 51 ವರ್ಷದ ಮಹಿಳೆ ಮಗಳಿಗಾಗಿ ಗರ್ಭ ಧರಿಸಿದ್ದಾರೆ.
ಅಮೆರಿಕದ ಕೆಲ್ಸಿ ಹಾಗೂ ಮಾಜಿ ಸೈನಿಕ ಕೈಲೆ ಪಿರ್ಸೇ ದಂಪತಿ ಸಾಕಷ್ಟು ವೈದ್ಯಕೀಯ ಪ್ರಯತ್ನಗಳ ಬಳಿಕವೂ ಮಗುವನ್ನ ಪಡೆಯುವಲ್ಲಿ ವಿಫಲರಾಗಿದ್ದರು. ಕೆಲ್ಸಿಯ ಅಂಡಾಣು ಕಡಿಮೆ ಗುಣಮಟ್ಟದ್ದಾಗಿದ್ದರಿಂದ ಆಕೆ ತಾಯಿಯಾಗೋದೇ ಕಷ್ಟ ಎಂದು ವೈದ್ಯರು ಹೇಳಿದ್ದರು.
ಮಗಳಿಗೆ ಈ ರೀತಿ ಕಷ್ಟವಾಗಿದೆ ಎಂಬುದನ್ನ ಅರಿತ 52 ವರ್ಷದ ಲಿಸಾ ರುಥರ್ ಫೋರ್ಡ್ ಮಗಳಿಗಾಗಿ ಮಿಚಿಗನ್ನಿಂದ ಪ್ರಯಾಣ ಬೆಳೆಸಿದರು. ಹಾಗೂ ಮಗಳ ಬಳಿ ನಿಮ್ಮಿಬ್ಬರ ಮಗುವನ್ನ ನನ್ನ ಗರ್ಭದಲ್ಲಿ ಹೊರಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಮಗಳು ಮೊದಲು ಒಪ್ಪಿರಲಿಲ್ಲ. ಆದರೆ ಕೆಲ್ಸಿ ತಾಯಿಯಾಗೋಕೆ ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ ಮೇಲೆ ಆಕೆ ಕೂಡ ಲಿಸಾ ತಾಯಿಯಾಗುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ರು.
ಲಿಸಾ ಗರ್ಭದಲ್ಲಿ ದಂಪತಿಯ ವೀರ್ಯ ಹಾಗೂ ಅಂಡಾಣುಗಳನ್ನ ಅಳವಡಿಸಿದ ಬಳಿಕ ಆಕೆ ಗರ್ಭಿಣಿಯಾದರು. ಆದರೆ ವಿಶೇಷ ಏನಪ್ಪ ಅಂದರೆ ಇದಾದ ಕೆಲವೇ ದಿನಗಳಲ್ಲಿ ಕೆಲ್ಸಿ ಕೂಡ ಗರ್ಭಿಣಿಯಾಗಿದ್ದಾರೆ. 8 ವಾರಗಳ ಅಂತರದಲ್ಲಿ ಇಬ್ಬರೂ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.