ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್ ಪಂಕ್ ಬೇರೆಯಾಗಲು ನಿರ್ಧರಿಸಿದ್ದಾರೆ. 1993ರಲ್ಲಿ ಸ್ಥಾಪನೆಯಾದ ಈ ಫ್ರೆಂಚ್ ಸಮೂಹ ಎಲೆಕ್ಟ್ರಾನಿಕ್ ಮ್ಯೂಸಿಕ್‌ಗೆ ಹೊಸ ಆಯಾಮವನ್ನೇ ಕೊಟ್ಟಿತ್ತು.
ಫ್ರೆಂಚ್ ವಾದಕರಾದ ಥಾಮಸ್ ಬಂಗಾಲ್ಟರ್ ಹಾಗೂ ಗಯ್-ಮ್ಯಾನುಯೆಲ್ ಇಬ್ಬರೂ ಸೇರಿಕೊಂಡು ಡಾಫ್ಟ್ ಪಂಕ್‌ಗೆ ಚಾಲನೆ ಕೊಟ್ಟಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ವೇಳೆ ಹೆಲ್ಮೆಟ್‌ಧಾರಿಗಳಾಗಿ ಫೇಮಸ್ ಆಗಿದ್ದರು ಈ ಜೋಡಿ. ಪ್ಯಾರಿಸ್‌ನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ಡಾರ್ಲಿಂಗ್ ಹೆಸರಿನ ಇಂಡಿ ರಾಕ್ ಬ್ಯಾಂಡ್ ಒಂದನ್ನು ಆರಂಭಿಸಿದ್ದರು ಈ ಇಬ್ಬರು.
ಎಪಿಲೋಗ್ ಹೆಸರಿನ 8 ನಿಮಿಷಗಳ ವಿಡಿಯೋ ಒಂದರ ಮೂಲಕ ತಮ್ಮ ಈ ಹೊಸ ನಿರ್ಧಾರವನ್ನು ಇಬ್ಬರೂ ಘೋಷಿಸಿದ್ದಾರೆ. ಬ್ಯಾಂಡ್‌ನ ಸುದೀರ್ಘಾವಧಿ ಪ್ರಚಾರಕ ಕ್ಯಾಥರಿನ್ ಫ್ರೇಜರ್ ಈ ವಿಚಾರವನ್ನು ಖಾತ್ರಿ ಪಡಿಸಿದ್ದಾರೆ.