ಟ್ವಿಟರ್ ಸಿಇಓ ಜಾಕ್ ಡೋರ್ಸೆ ಅವರು ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಇಬ್ಬರನ್ನೂ ಅನ್‌ಫಾಲೋ ಮಾಡುವ ಮೂಲಕ ಸುದ್ದಿ ಮಾಡುತ್ತಿದ್ದಾರೆ.
ಇದೇ ವೇಳೆ ಡೋರ್ಸೆ ಅವರು ಉಪಾಧ್ಯಕ್ಷೆಯಾಗಿ ಚುನಾಯಿತರಾದ ಕಮಲಾ ಹ್ಯಾರಿಸ್‌ರನ್ನು ಸಹ ಅನ್‌ಫಾಲೋ ಮಾಡಿದ್ದಾರೆ. ಈ ಬೆಳವಣಿಗೆಗಳನ್ನು ಬಿಗ್ ಟೆಕ್ ಅಲರ್ಟ್ಸ್ ನೋಟ್ ಮಾಡಿದೆ. ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಡೋರ್ಸೆ ಯಾರನ್ನೆಲ್ಲಾ ಫಾಲೋ ಮಾಡುತ್ತಾರೆ ಎಂದು ಅಪ್‌ಡೇಟ್ ಮಾಡುತ್ತದೆ.
ಅಮೆರಿಕ ಅಧ್ಯಕ್ಷರಾಗಿದ್ದ ಕಾರಣ ಟ್ರಂಪ್‌ಗೆ ಟ್ವಿಟರ್‌ನಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳು ಇದ್ದವು. ಮುಂದಿನ ತಿಂಗಳು ಬಿಡೆನ್‌ಗೆ ಕಾರ್ಯಲಯ ಬಿಟ್ಟುಕೊಡಲಿರುವ ಟ್ರಂಪ್ ಈ ವಿಶೇಷ ಭದ್ರತೆಯನ್ನು ಕಳೆದುಕೊಳ್ಳಲಿದ್ದಾರೆ.
ಸದ್ಯದ ಮಟ್ಟಿಗೆ ಟ್ವಿಟರ್‌ನಲ್ಲಿ ಟ್ರಂಪ್‌ರನ್ನು 8.85 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ಬಿಡೆನ್‌ರನ್ನು 2.5 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ.