ಲೈವ್ ನಲ್ಲೇ ವರದಿಗಾರನಿಗೆ ಗನ್ ಹಿಡಿದ ದರೋಡೆಕೋರ 19-02-2021 8:13PM IST / No Comments / Posted In: Latest News, International ಈಕ್ವೆಡಾರ್ನಲ್ಲಿ ಟಿವಿ ವರದಿಗಾರ ಹಾಗೂ ಹಾಗೂ ಕ್ಯಾಮರಾಮನ್ ನೇರ ಸಂದರ್ಶನ ನಡೆಸುತ್ತಿರುವ ವೇಳೆಯಲ್ಲೇ ಗನ್ ಪಾಯಿಂಟ್ ತೋರಿಸಿ ದರೋಡೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಫೆಬ್ರವರಿ 12ರಂದು ನಡೆದಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವರದಿಗಾರ ಹಾಗೂ ಆತನ ಸಿಬ್ಬಂದಿಗೆ ಗನ್ ಪಾಯಿಂಟ್ ಹಿಡಿದ ದರೋಡೆಕೋರ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಈ ಪತ್ರಕರ್ತನನ್ನ ಡಿಯಾಗೋ ಆರ್ಡಿನೋಲಾ ಎಂದು ಗುರುತಿಸಲಾಗಿದೆ. ತನ್ನ ಮುಖಚರ್ಯೆ ಕಾಣದಂತೆ ಮಾಡಲು ದರೋಡೆಕೋರ ಫೇಸ್ ಮಾಸ್ಕ್ ಹಾಗೂ ಟೋಪಿಯನ್ನ ಧರಿಸಿದ್ದ. ಈತನ ಬೆದರಿಕೆಗೆ ಹೆದರಿದ ಸಿಬ್ಬಂದಿ ತಮ್ಮ ಸಾಧನಗಳನ್ನ ದರೋಡೆಕೋರನಿಗೆ ನೀಡಿದ್ದಾರೆ. Ni siquiera podemos trabajar tranquilos, esto ocurrió a las 13:00 de hoy en las afueras del Estadio Monumental.La @PoliciaEcuador se comprometió a dar con estos delincuentes. #Inseguridad pic.twitter.com/OE2KybP0Od — Diego Ordinola (@Diegordinola) February 12, 2021