
ನ್ಯೂನ್ ನೇಷನ್ ನೌ ಎಂಬ ಸುದ್ದಿ ವಾಹಿನಿಯಲ್ಲಿ ಹವಾಮಾನ ವರದಿಗಾರನಾಗಿ ಕೆಲಸ ಮಾಡುವ ಆಲ್ಬರ್ಟ್ ರಾಮೊನ್ ತಮ್ಮ ಅಜ್ಜ-ಅಜ್ಜಿ ತಮ್ಮ ಮೇಲೆ ತೋರಿದ ಪ್ರೀತಿಯ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಅಜ್ಜಿ ಕಳುಹಿಸಿರುವ ಸಂದೇಶಗಳ ಸರಣಿಯ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡ ರಾಮೊನ್, ತಾವು ಇಷ್ಟುದ್ದ ಆದರೂ ಸಹ ತಮ್ಮ ಅಜ್ಜಿ ತನ್ನನ್ನು ಹೇಗೆ ಕೇರ್ ಮಾಡುತ್ತಾರೆ ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ.
“ಪ್ರತಿ ರಾತ್ರಿ ಅಜ್ಜಿ ನನಗೆ ಸಂದೇಶ ಕಳುಹಿಸುತ್ತಾರೆ. ಅವರು ತಮ್ಮ ಎಲ್ಲಾ ಟೆಲೆನೋವೆಲಾಗಳನ್ನು ರೆಕಾರ್ಡ್ ಮಾಡಿಕೊಂಡು ನನ್ನನ್ನು ಲೈವ್ ಆಗಿ ವೀಕ್ಷಿಸುತ್ತಾರೆ…. ಆ ಪ್ರೀತಿ ಇನ್ನೂ ಹಾಗೇ ಇದೆ” ಎಂದು ಕ್ಯಾಪ್ಷನ್ನಲ್ಲಿ ಬರೆದಿದ್ದಾರೆ ಆಲ್ಬರ್ಟ್ ರಾಮೊನ್.