ಟಿವಿ ಚಾನಲ್ ಗಳಲ್ಲಿ ನೇರ ಪ್ರಸಾರದ ವರದಿಗಾರಿಕೆ ಮಾಡುವುದು ಅಷ್ಟು ಸುಲಭವಲ್ಲ. ಹವಾಮಾನ ವರದಿ ನೀಡಲು ಹಿಮಾಚ್ಛಾದಿತ ಬೆಟ್ಟದಿಂದ ಜಾರಿದ ಕೆನಡಾದ ವರದಿಗಾರನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸಿ ಟಿವಿ ಟೊರಾಂಟೋ ವರದಿಗಾರ ಅನ್ವರ್ ನೈಟ್ ಹಿಮಾವೃತ ಬೆಟ್ಟದ ಮೇಲೆ ನಿಂತು ಹವಾಮಾನ ವರದಿಗಾರಿಕೆ ಮಾಡುತ್ತಾ ಇರುತ್ತಾರೆ. ಮಂಜುಗಡ್ಡೆಯಿಂದ ಕೂಡಿದ ಆ ಬೆಟ್ಟದ ತಳ ಭಾಗದ ವಾತಾವರಣ ಹೇಗಿರಬಹುದು ಎಂಬುದನ್ನು ಸ್ವತಃ ಅನುಭವಿಸಿ ವರದಿ ಮಾಡುವ ಸಲುವಾಗಿ ಬೆಟ್ಟದಿಂದ ಕೆಳಗೆ ಜಾರಿ ಕೆಲ ದೂರ ಕ್ರಮಿಸುತ್ತಾರೆ.
ಸ್ಟುಡಿಯೋದಲ್ಲಿದ್ದ ಆ್ಯಂಕರ್ ಹುಷಾರು, ಎಚ್ಚರ ಎಂದು ಹೇಳುತ್ತಲೇ ಇರುತ್ತಾರೆ. ಅಂತೂ ನಡುಗುತ್ತಾ ಬೆಟ್ಟದ ತಳ ತಲುಪುವ ಅನ್ವರ್, ಜಾರಿ ಬೀಳದೇ ಇದ್ದದ್ದು ಹೆಚ್ಚು.
ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
https://www.instagram.com/p/CJ9eMBnBLZ1/?utm_source=ig_web_copy_link