ಪ್ರಾಥಮಿಕ ಪರೀಕ್ಷೆಗಳಲ್ಲಿ ಕೊರೊನಾ ವಿರುದ್ಧ 91 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದ ಹಿನ್ನೆಲೆ ಟರ್ಕಿ ಸರ್ಕಾರ ಚೀನಾದ ಸಿನೋವಾಕ್ ಕೊರೊನಾ ವೈರಸ್ ಲಸಿಕೆಗಳನ್ನ ಕೆಲವೇ ದಿನಗಳಲ್ಲಿ ಸ್ವೀಕರಿಸಲಿದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಮಾಹಿತಿ ನೀಡಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿ ಪೈಜರ್ / ಬಯೋಟೆಕ್ ಜೊತೆ 4.5 ಮಿಲಿಯನ್ ಡೋಸ್ಗಳಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಕೋಕಾ ಹೇಳಿದ್ದಾರೆ.
ಟರ್ಕಿ ಪ್ರಾಥಮಿಕ ಹಂತದಲ್ಲಿ ಮೂರು ದಶಲಕ್ಷ ಡೋಸ್ ಸಿನೋವಾಕ್ಗಳನ್ನ ಸ್ವೀಕರಿಸಲಿದೆ ಹಾಗೂ ಮುಂದಿನ ತಿಂಗಳು ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲು ಟರ್ಕಿ ಸರ್ಕಾರ ನಿರ್ಧರಿಸಿದೆ.
ಚೀನಾದ ಲಸಿಕೆಗಳನ್ನ ಟರ್ಕಿಯ 7321 ಸ್ವಯಂ ಸೇವಕರಿಗೆ ನೀಡಲಾಗಿದ್ದು ಪ್ರಾಥಮಿಕ ಪರೀಕ್ಷೆಯಲ್ಲಿ 91.25 ಪ್ರತಿಶತದಷ್ಟು ಪರಿಣಾಮಕಾರತ್ವವನ್ನ ತೋರಿಸಿದೆ. ಆದರೆ ಮೂರನೇ ಹಂತದ ಪರೀಕ್ಷೆಗಳು ಇನ್ನೂ ಪೂರ್ಣಗೊಂಡಿಲ್ಲ.