ತಮಗಿಷ್ಟವಾದ ಅಥವಾ ತಾವೇ ಮಾಡಿದ ವಿಡಿಯೋವನ್ನು ಅಪ್ ಲೋಡ್ ಮಾಡಿ ಹೆಚ್ಚು ಹೆಚ್ಚು ವೀವ್ಸ್ ಪಡೆಯಲು ಎಷ್ಟೋ ಮಂದಿ ಇನ್ನಿಲ್ಲದ ಸರ್ಕಸ್‌ಗೆ ಮುಂದಾಗುತ್ತಾರೆ. ಆದರೆ ಪ್ರೇಕ್ಷಕರಿಗೆ ಇಷ್ಟವಾಗುವ ವಿಡಿಯೋಗಳು ಮಾತ್ರ ಹೆಚ್ಚು ವೀವ್ಸ್ ಪಡೆಯುತ್ತದೆ. ಅಕಸ್ಮಾತ್ ಆಗಿ ಪೋಸ್ಟ್ ಆಗುವ ವಿಡಿಯೋಗಳು ಕೂಡ ಕೆಲವೊಮ್ಮೆ ಹೆಚ್ಚು ಸದ್ದು ಮಾಡೋದನ್ನು ನೋಡಿದ್ದೇವೆ. ಇದೀಗ ಇಂತಹದ್ದೇ ವಿಡಿಯೋ ಒಂದು ಸದ್ದು ಮಾಡುತ್ತಿದೆ.
ವಿದ್ಯಾರ್ಥಿನಿಯೊಬ್ಬಳು ಸೀನುವ ವಿಡಿಯೋ ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಈ ಘಟನೆ ನಡೆದಿರೋದು ಜಕಾರ್ತದಲ್ಲಿ. ಈಸ್ಟ್ ಜಾವಾ ಪ್ರಾಂತ್ಯದ ಬಾನ್ಯುವಾಂಗಿ ನಗರದಲ್ಲಿ ವಾಸವಾಗಿರುವ ಜಿದ್ದಾನಾ ದಸ್ತಿರಿಯಾ ಎಂಬ ಹೈಸ್ಕೂಲ್ ವಿದ್ಯಾರ್ಥಿನಿ ತಾನು ಸೀನಿರುವ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಆಕಸ್ಮಿಕವಾಗಿ ಪೋಸ್ಟ್ ಮಾಡಿದ್ದಾಳೆ.
ಪೋಸ್ಟ್ ಮಾಡಿದ ನಂತರವೂ ಇದು ಅವಳ ಗಮನಕ್ಕೆ ಬಂದಿಲ್ಲ. ಮಾರನೇ ದಿನ ವಿಡಿಯೋ ವೈರಲ್ ಆಗಿರುವ ಬಗ್ಗೆ ಅವಳಿಗೆ ಗೊತ್ತಾಗಿದೆ. ಆದರೆ ಕೇವಲ ಒಂದು ವಾರದಲ್ಲಿ ಈ ವಿಡಿಯೋ ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.