ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಟ್ವಿಟರ್ ಖಾತೆಯನ್ನ ಡಚ್ ಭದ್ರತಾ ಸಂಶೋಧಕರೊಬ್ಬರು ಹ್ಯಾಕ್ ಮಾಡಿದ್ರು . ಈ ಸಂಶೋಧಕ ಟ್ರಂಪ್ರ ಟ್ವಿಟರ್ ಖಾತೆ ಪಾಸವರ್ಡ್ನ್ನ ಸುಮ್ಮನೇ ಊಹೆ ಮಾಡೋದ್ರ ಮೂಲಕ ಲಾಗ್ ಇನ್ ಆಗಿದ್ದಾರೆ ಎನ್ನಲಾಗಿದೆ.
ಜಿಡಿಐ ಫೌಂಡೇಷನ್ನ ಭದ್ರತಾ ಸಂಶೋಧಕರಾಗಿರುವ ವಿಕ್ಟರ್ ಗೇವರ್ಸ್ ನಾಲ್ಕು ಬಾರಿ ಟ್ರಂಪ್ರ ಟ್ವಿಟರ್ ಖಾತೆಯ ಪಾಸ್ವರ್ಡ್ ಹಾಕುವಲ್ಲಿ ವಿಫಲರಾಗಿದ್ದಾರೆ , 5ನೇ ಬಾರಿಗೆ ’ maga2020’ ಎಂದು ಟೈಪ್ ಮಾಡ್ತಿದ್ದಂತೆಯೇ ಖಾತೆ ಓಪನ್ ಆಗಿದೆ.
maga2020 ಅಂದರೆ ಅಮೆರಿಕವನ್ನ ಮತ್ತೊಮ್ಮೆ ಶ್ರೇಷ್ಠವಾಗಿಸಿ (Make America Great Again) ಎಂದು ಅರ್ಥವಂತೆ. ಈ ಮಾತನ್ನ ಟ್ರಂಪ್ ಪದೇ ಪದೇ ತಮ್ಮ ಭಾಷಣಗಳಲ್ಲಿ ಬಳಕೆ ಮಾಡುತ್ತಿದ್ದರಂತೆ.