ಟ್ರಂಪ್ ಮುಖ್ಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ: ಮಾಸ್ಕ್ ಧರಿಸದಿರೋದೇ ಕಾರಣ ಎಂದ ನೆಟ್ಟಿಗರು 07-11-2020 5:50PM IST / No Comments / Posted In: Corona, Corona Virus News, Featured News, International ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಮುಖ್ಯ ಸಿಬ್ಬಂದಿಯಲ್ಲೊಬ್ಬರಾದ ಮಾರ್ಕ್ ಮೆಡೋವ್ಸ್ ಎಂಬವರಿಗೆ ಸೋಂಕು ದೃಢಪಟ್ಟಿದೆ. ಮೆಡೋವ್ಸ್ಗೆ ಸೋಂಕು ದೃಢಪಟ್ಟಿರೋದ್ರ ಬಗ್ಗೆ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಕೊರೊನಾದಿಂದ 236000ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ಮಾರ್ಕ್ ಮೆಡೋವ್ಸ್ ಸಾರ್ವಜನಿಕ ಸ್ಥಳದಲ್ಲಿ ಕೊನೆಯ ಬಾರಿಗೆ ಟ್ರಂಪ್ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ಮಾರ್ಕ್ ಮಾಸ್ಕ್ ಧರಿಸಿರಲಿಲ್ಲ. ಮೆಡೋವ್ಸ್ ಗೆ ಸೋಂಕು ದೃಢವಾಗಿರುವ ವಿಚಾರ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಮಾಸ್ಕ್ ಹಾಕದ ಮಾರ್ಕ್ರ ಫೋಟೋ ವೈರಲ್ ಮಾಡಿದ್ದಾರೆ. ಅಲ್ಲದೇ ಯಾರು ಕೂಡ ಅಧಿಕಾರಿಗೆ ಸೋಂಕು ತಗುಲಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿಲ್ಲ. ಆದರೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರುವ ಮೆಡೋವ್ಸ್ಗೆ ಕೊರೊನಾ ಸೂಪರ್ ಸ್ಪ್ರೆಡರ್ ಆಗದೇ ಇದ್ದರೆ ಸಾಕು ಅಂತಾ ಕಳವಳ ವ್ಯಕ್ತಪಡಿಸಿದ್ದಾರೆ. Here's a maskless Mark Meadows, White House Chief of Staff now confirmed to have tested positive for COVID, at Trump Campaign HQ on Election Night. pic.twitter.com/ECADDxWWnX — The Recount (@therecount) November 7, 2020 Mark Meadows, who laughed at reporters who asked him to put on a mask while being interviewed, has tested positive for coronavirus. It is what it is. — Randi Mayem Singer (@rmayemsinger) November 7, 2020