ನ್ಯೂಯಾರ್ಕ್: ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಕಾರಣ ನೀಡಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರನ್ನು ಟ್ವಿಟ್ಟರ್ ಬ್ಲಾಕ್ ಮಾಡಿದೆ. ಹಿಂದೆಂದೂ ಆಗದಂಥ ಮಹತ್ವದ ನಿರ್ಣಯದಿಂದ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ. ಈ ನಡುವೆ ವಾಕ್ ಸ್ವಾತಂತ್ರ್ಯಕ್ಕೆ ಟ್ವಿಟರ್ ಧಕ್ಕೆ ತಂದಿದೆ ಎಂಬ ಕಾರಣ ನೀಡಿ ಟ್ರಂಪ್ ಬೆಂಬಲಿಗರು ಟ್ವಿಟರ್ ತ್ಯಜಿಸುತ್ತಿದ್ದಾರೆ.
#ಗುಡ್ ಬಾಯ್ ಟ್ವಿಟರ್# ಎಂಬ ಸಂದೇಶ ಪಾರ್ಲರ್ ಎಂಬ ಮೈಕ್ರೊ ಬ್ಲಾಗಿಂಗ್ ಆ್ಯಪ್ ನಲ್ಲಿ ಹರಿದಾಡುತ್ತಿದೆ. ಪಾರ್ಲರ್ ಆ್ಯಪ್ ವಾಕ್ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುತ್ತಿದೆ. ಬಲ ಪಂಥೀಯ ವಿಚಾರವಾದ ಹೊಂದಿದೆ ಎಂದು ಚರ್ಚಿಸಲಾಗುತ್ತಿದೆ.
ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಟ್ರಂಪ್ ಬೆಂಬಲಿಗರು ಗಲಭೆ ನಡೆಸಿದ್ದರು. ಇದರಿಂದ ಐವರು ಮೃತಪಟ್ಟಿದ್ದರು. ಆ ನಂತರ ಟ್ವಿಟರ್, ಡೊನಾಲ್ಡ್ ಟ್ರಂಪ್ ಅವರ ಖಾತೆ ಸಸ್ಪೆಂಡ್ ಮಾಡಿತ್ತು.