ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಿಲ್ಲೊಂದು ವಿಷಯಕ್ಕೆ ನೆಟ್ಟಿಗರ ಬಾಯಿಗೆ ಆಹಾರವಾಗುತ್ತಿದ್ದಾರೆ. ಟ್ರಂಪ್ ಅಥವಾ ಅವರ ಪತ್ನಿ ಮಲೇನಿಯಾ ಟ್ರಂಪ್ ಸಹ ನೆಟ್ಟಿಗರ ಟ್ರೋಲ್‌ಗೆ ಆಹಾರವಾಗಿರುವುದು ಸಹಜ.
ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ಜತೆ ಮಲೇನಿಯಾ ದಕ್ಷಿಣ ಡಕೋಟಾಕ್ಕೆ ಪ್ರವಾಸ ನಡೆಸಿದ ಸಮಯದಲ್ಲಿ ಅವರು ಧರಿಸಿದ್ದ ಬಟ್ಟೆ ಇದೀಗ ನೆಟ್ಟಿಗರ ಟ್ರೋಲ್‌ಗೆ ಕಾರಣವಾಗಿದೆ. ಅವರು ಧರಿಸಿದ್ದ ಬಟ್ಟೆಯ ಮೇಲೆ ಏನೋ ಗೀಚಿದಂತಾ ರೇಖೆಗಳು ಇರುವುದನ್ನು ಗಮನಿಸಿದ ನೆಟ್ಟಿಗರು ಮಲೇನಿಯಾ ಬಟ್ಟೆಯ ಮೇಲೆ ಟ್ರಂಪ್ ಗೀಚಿದ್ದಾರೆ ಎಂದು ಟ್ರೋಲ್ ಮಾಡಿದರು.
ಇದೀಗ ಈ ಫೋಟೋ ವೈರಲ್ ಆಗಿದೆ. ಕೆಲವರು ಟ್ರಂಪ್ ಬಟ್ಟೆಯ ಮೇಲೆ ಗೀಚುತ್ತಿರುವ ರೀತಿ ವ್ಯಂಗ್ಯ ಚಿತ್ರ ಬಿಡಿಸಿದರೆ, ಇನ್ನು ಕೆಲವರು ಮಾತಿನಲ್ಲೇ ಚಾಟಿ ಬೀಸಿದ್ದಾರೆ.
https://twitter.com/Cathygraphics1/status/1279307488417001474?ref_src=twsrc%5Etfw%7Ctwcamp%5Etweetembed%7Ctwterm%5E1279307488417001474%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftrump-scribbled-all-over-it-netizens-have-hilarious-reactions-to-melania-trumps-sharpie-dress%2F616411
https://twitter.com/Redpainter1/status/1279242653528399873?ref_src=twsrc%5Etfw%7Ctwcamp%5Etweetembed%7Ctwterm%5E1279242653528399873%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftrump-scribbled-all-over-it-netizens-have-hilarious-reactions-to-melania-trumps-sharpie-dress%2F616411