
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬುರ್ಕಾಧಾರಿ ಮಹಿಳೆ, ಡೊನಾಲ್ಡ್ ಟ್ರಂಪ್ ನನ್ನ ನಿಜವಾದ ತಂದೆ. ನಾನು ನನ್ನ ತಂದೆಯನ್ನ ಭೇಟಿಯಾಗಲು ಬಯಸುತ್ತೇನೆ ಎಂದು ವರದಿಗಾರರ ಬಳಿ ಹೇಳಿಕೊಳ್ಳುತ್ತಿರೋದನ್ನ ಕಾಣಬಹುದಾಗಿದೆ.
ನನ್ನ ತಂದೆಯಾದ ಟ್ರಂಪ್ ನನ್ನ ತಾಯಿ ಬಳಿ ಮಗಳನ್ನ ನೋಡಿಕೊಳ್ಳೋದಿಲ್ಲ ಎಂದು ಹೇಳಿದ್ದರು. ಅಲ್ಲದೇ ಈ ವಿಚಾರಕ್ಕಾಗಿ ನನ್ನ ತಾಯಿ ಹಾಗೂ ಟ್ರಂಪ್ ನಡುವೆ ಹಲವು ಭಾರಿ ಜಗಳ ಆಗಿದೆ ಎಂದು ಹೇಳಿದ್ದಾಳೆ.
ಡಿಸೆಂಬರ್ 2018ರ ಈ ವಿಡಿಯೋ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಟ್ರಂಪ್ ಕಾಲೆಳೆಯೋ ಕೆಲಸ ಮಾಡ್ತಿದ್ದಾರೆ. ಆದರೆ ಅಧಿಕೃತ ಮಾಹಿತಿ ಪ್ರಕಾರ ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಜ್ಯೂನಿಯರ್, ಬ್ಯಾರೋನ್ ಟ್ರಂಪ್, ಎರಿಕ್ ಟ್ರಂಪ್ ಹಾಗೂ ಟಿಫಾನಿ ಟ್ರಂಪ್ ಎಂಬವರು ಡೊನಾಲ್ಡ್ ಟ್ರಂಪ್ರ ಮಕ್ಕಳಾಗಿದ್ದಾರೆ.