ಕೊರೊನಾ ಸಣ್ಣ ಜ್ವರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್ ಡಿಲಿಟ್ ಮಾಡಿದೆ.
ಕೊರೊನಾ ಕುರಿತಾಗಿ ಡೊನಾಲ್ಡ್ ಟ್ರಂಪ್ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಟ್ವೀಟ್ ಡಿಲಿಟ್ ಮಾಡಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಫೇಸ್ ಬುಕ್ ಕೂಡ ಟ್ರಂಪ್ ನೀಡಿದ್ದ ತಪ್ಪು ಮಾಹಿತಿಯನ್ನು ತೆಗೆದು ಹಾಕಿದೆ.
ಅಪಾರ ಸಂಖ್ಯೆಯ ಜನರನ್ನು ಬಲಿ ಪಡೆದು ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೂ ಸೋಂಕು ತಗುಲಿದೆ. ಕೊರೊನಾ ಸೋಂಕು ತಗುಲಿ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಟ್ರಂಪ್ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗದಿದ್ದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಶ್ವೇತಭವನಕ್ಕೆ ಆಗಮಿಸಿದ ಕೂಡಲೇ ಮಾಸ್ಕ್ ತೆಗೆದಿದ್ದಾರೆ.
ಅವರು ಕೊರೊನಾ ಒಂದು ಸಣ್ಣ ಜ್ವರ ಎಂದು ತಪ್ಪು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅವರ ಟ್ವೀಟ್ ಡಿಲಿಟ್ ಮಾಡಲಾಗಿದೆ.