ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ ಹೊರತೆಗೆಯಲಾಗಿದ್ದು, ಇದು ಪ್ರಕೃತಿಯ ನಿಜವಾದ ಚೇತನ ಎಂದು ಹೆಸರಾಂತ ಹರಾಜು ಕಂಪನಿ ಸೋಥೆಬಿಸ್ ಹೇಳಿಕೊಂಡಿದೆ.
ಈ ವಜ್ರವನ್ನು ʼದಿ ಸ್ಪಿರಿಟ್ ಆಫ್ ದಿ ರೋಸ್ʼ ಎಂದು ಕರೆಯಲಾಗಿದೆ. 1911ರಲ್ಲಿ ಖ್ಯಾತ ನೃತ್ಯಗಾರ್ತಿ ವಾಸ್ಲಾವ್ ನಿಜಿನ್ಕಿ ನೆನಪಿಗಾಗಿ ಬ್ಯಾಲೆಟ್ ರಸ್ಸೆಸ್ ಎಂದು ಹೆಸರಿಸಲಾಯಿತು. ಇದರ ತೂಕ ಸುಮಾರು 14.83 ಕ್ಯಾರೆಟ್ ಇದ್ದು, ಇದು ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗಲು ಅದರ ಪಿಂಕ್ ಬಣ್ಣವೇ ಕಾರಣ ಎಂದು ಹೇಳಲಾಗಿದೆ.
ಇಂತಹ ಬಣ್ಣದ ವಜ್ರಗಳು ತೀರಾ ವಿರಳವಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಸಹ ಬಣ್ಣದ ಕಲ್ಲುಗಳನ್ನು ವಕ್ರೀಭವಿಸುವ ವೇಳೆ ಲ್ಯಾಟಿಸ್ ರಚನೆಯಿಂದಾಗಿ ವಿಭಿನ್ನ ಬಣ್ಣಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಈ ವಜ್ರವನ್ನು ರಷ್ಯಾದ ವಜ್ರ ಉತ್ಪಾದಕ ಅಲ್ರೋಸಾ 2017ರಲ್ಲಿ ಗಣಿಗಾರಿಕೆ ಮಾಡಿದ್ದಾರೆ.