ಆಪ್ಟಿಕಲ್ ಇಲ್ಯೂಶನ್ ಅಥವಾ ದೃಷ್ಟಿ ಭ್ರಮೆ ಅನ್ನೋದು ಸಾಕಷ್ಟು ಬಾರಿ ನಮ್ಮ ಮೆದುಳಿಗೆ ಭಾರೀ ಕೆಲಸವನ್ನ ಕೊಟ್ಟು ಬಿಡುತ್ತೆ. ಎಲ್ಲಾ ಆಯಾಮಗಳಲ್ಲಿ ದೃಶ್ಯವನ್ನ ನೋಡಿದ ಬಳಿಕವೇ ವಾಸ್ತವ ಚಿತ್ರಣ ಕಣ್ಮುಂದೆ ಬರುತ್ತೆ.
ಒಂದು ಇಲ್ಯೂಶನ್ಗಳು ಒಂದೊಂದು ರೀತಿಯಲ್ಲಿ ಇರುತ್ತೆ. ಬಣ್ಣಗಳ ಆಧಾರದಲ್ಲಿ, ದೃಶ್ಯದ ಆಧಾರದ ಮೇಲೆ ಈ ದೃಷ್ಟಿ ಭ್ರಮೆಗಳು ವಿಭಿನ್ನವಾಗಿ ಕಾಣುತ್ತವೆ.
ಇದೇ ರೀತಿಯ ಆಪ್ಟಿಕಲ್ ಇಲ್ಯೂಶನ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಕ್ಯಾಲಿಫೋರ್ನಿಯಾ ಮೂಲದ ಹನ್ನಾ ಕೊಸ್ಬಿ ಎಂಬಾಕೆ ಆಕಾಶದಲ್ಲಿ ಜೀಪನ್ನ ಓಡಿಸಿಕೊಂಡು ಹೋಗುತ್ತಿರುವಂತೆ ಕಾಣುತ್ತಿದೆ.
ಆದರೆ ಇದಾದ ಬಳಿಕ ಈಕೆ ಎತ್ತರದ ರಸ್ತೆಯಲ್ಲಿ ಜೀಪ್ ಸವಾರಿ ಮಾಡುತ್ತಿದ್ದು, ಹೀಗಾಗಿ ಆಕೆ ಆಕಾಶದಲ್ಲಿ ಜೀಪ್ ಚಲಾಯಿಸಿದಂತೆ ಕಂಡು ಬರ್ತಿದೆ ಅನ್ನೋದು ತಿಳಿಯುತ್ತೆ. ಈ ವಿಡಿಯೋ ಮಿಲಿಯನ್ಗಟ್ಟಲೇ ವೀವ್ಸ್ನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಈ ವಿಡಿಯೋವನ್ನ ಮೌಂಟ್ ಹಳೇಕಲಾ ಮಾಯಿಯಲ್ಲಿ ಚಿತ್ರೀಕರಿಸಲಾಗಿದೆ.