ಕೊರೊನಾ ಕಾರಣದಿಂದ ಬಂದ್ ಆಗಿದ್ದ ಮ್ಯೂಸಿಯಂ, ಒಪೆರಾ ಹೌಸ್, ಥೀಮ್ ಪಾರ್ಕ್, ಅಮ್ಯುಸ್ಮೆಂಟ್ ಪಾರ್ಕ್ ಗಳು ಒಂದೊಂದಾಗಿಯೇ ಚಟುವಟಿಕೆ ಪುನಾರಂಭ ಮಾಡುತ್ತಿವೆ.
ಇತ್ತೀಚೆಗೆ ಜಪಾನ್ ನಲ್ಲಿ ಲಾಕ್ ಡೌನ್ ಸಡಿಲಗೊಂಡು, ಮನರಂಜನಾ ಚಟುವಟಿಕೆಗಳಿಗೆ ಅವಕಾಶ ಕೊಡಲಾಗಿದೆ. ಆದರೆ, ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕೆಂಬ ನಿಯಮದಲ್ಲಿ ಯಾವುದೇ ರಾಜಿ ಇಲ್ಲ. ಇನ್ನು ಅಂತರ ಕಾಯ್ದುಕೊಳ್ಳಬೇಕಿರುವ ಅನಿವಾರ್ಯತೆ ಇರುವುದರಿಂದ ಪ್ರವೇಶ ಕೂಡ ನಿಗದಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ನಿಗದಿಪಡಿಸಲಾಗಿದೆ.
ರೋಲರ್ ಕೋಸ್ಟರ್ ಅಲ್ಲಿ ರೈಡ್ ಮಾಡುವವರು ಯಾವುದೇ ಕಾರಣಕ್ಕೂ ಕಿರುಚುವಂತಿಲ್ಲ. ಜೋರಾಗಿ ನಗುವಂತಿಲ್ಲ. ಇದರಿಂದ ಎಂಜಲು ಹಾರಿ ಕೊರೋನಾ ಹರಡಬಹುದು ಎಂದು ಸ್ಥಳೀಯ ಆಡಳಿತ ಆದೇಶಿದೆ. ಆದರೆ, ಎದೆ ಝೆಲ್ಲೆನ್ನಿಸುವ ರೋಲರ್ ಕೋಸ್ಟರ್ ನಲ್ಲಿ ಕುಳಿತು ಕಿರುಚದೇ ಇರಲು ಸಾಧ್ಯವೆ ? ಹೀಗಾಗಿ ಕಿರುಚುವ ಮಾದರಿಯ ಸ್ಟಿಕ್ಕರ್ ಗಳನ್ನು ಮಾಡಿಸಿಟ್ಟಿರುವ ಥೀಮ್ ಪಾರ್ಕ್, ಅದನ್ನು ಮಾಸ್ಕ್ ಮೇಲೆ ಅಂಟಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ವಿಡಿಯೋವನ್ನು ಗ್ರೀನ್ ಲ್ಯಾಂಡ್ ರೆಸಾರ್ಟ್ಸ್ ತನ್ನ ಯುಟ್ಯೂಬ್ ಚಾನಲ್ ಅಲ್ಲಿ ಪೋಸ್ಟ್ ಮಾಡಿದೆ.
https://www.youtube.com/watch?v=qQsMbsMG_NI&feature=emb_logo