ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಜಗತ್ತು ಸಹಜ ಸ್ಥಿತಿಯತ್ತ ಬರಲು ನೋಡುತ್ತಿದೆ. ಮ್ಯೂಸಿಯಮ್‌ಗಳು, ರೆಸ್ಟೋರೆಂಟ್‌ಗಳು, ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳು ನಿಧಾನವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದೇ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್ ಧರಿಸಬೇಕಾದ ಅಗತ್ಯತೆಗಳನ್ನು ಸಾರ್ವಜನಿಕರಿಗೆ ಅಲ್ಲಲ್ಲಿ ತಿಳಿ ಹೇಳಲಾಗುತ್ತಿದೆ.
ಜಪಾನ್‌ನ ಥೀಮ್ ಪಾರ್ಕ್ ಒಂದರಲ್ಲಿ ರೋಲರ್ ಕೋಸ್ಟರ್ ರೈಡ್ ವೇಳೆ ಜನರ ಕಿರುಚಬಾರದು ಎಂದು ಅಲ್ಲಿನ ಆಡಳಿತ ತನ್ನಲ್ಲಿಗೆ ಬರುವ ಮಂದಿಗೆ ವಿನಂತಿಸಿಕೊಂಡಿದೆ. ಆದರೆ ಜೋರಾಗಿ ಕಿರುಚದೇ ರೋಲರ್ ಕೋಸ್ಟರ್ ರೈಡ್ ಮಾಡುವುದನ್ನು ಊಹಿಸಲಾದರೂ ಸಾಧ್ಯವೇ? ಇದಕ್ಕೆ ಪರಿಹಾರವನ್ನು ಕಂಡುಕೊಂಡಿರುವ ಜಪಾನ್‌ನ ಥೀಮ್ ಪಾರ್ಕ್, ಫ್ಯಾನ್ಸಿ ಮಾಸ್ಕ್‌ಗಳನ್ನು ಹಾಕಿಕೊಳ್ಳಲು ಜನರಿಗೆ ತಿಳಿಸಿದೆ.
ಇಲ್ಲಿನ ಗ್ರೀನ್‌ಲ್ಯಾಂಡ್ ರೆಸಾರ್ಟ್‌ಗೆ ಬರುವ ಜನರು ರೋಲರ್ ಕೋಸ್ಟರ್ ರೈಡ್ ವೇಳೆ ಈ ’ಸ್ಕ್ರೀಮಿಂಗ್ ಮಾಸ್ಕ್’ಗಳನ್ನು ಧರಿಸಿಕೊಂಡಿರುವ ವಿಡಿಯೋವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.
https://www.youtube.com/watch?time_continue=1&v=qQsMbsMG_NI&feature=emb_logo