ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.
ನ್ಯೂಯಾರ್ಕ್‌ನ ಅರಣ್ಯೋತ್ಪನ್ನಗಳ ಪ್ರಯೋಗಾಲಯದ ಸಂಶೋಧಕರು ತೆಳುವಾಗಿ, ಗಾಜಿನಂತೆ ಪಾರದರ್ಶಕವಾದ ಮರದ ವಸ್ತುವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ಉತ್ಪನ್ನವು ಸಾಕಷ್ಟು ಹಗುರ ಹಾಗೂ ಇಂಧನ-ದಕ್ಷತೆ ಹೊಂದಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ….! ಬೆಲೆ ಎಷ್ಟು ಗೊತ್ತಾ….?
ಕೊಲರಾಡೋದ ಮೇರಿಲ್ಯಾಂಡ್ ವಿವಿಯ ವಿಜ್ಞಾನಿಗಳು ಅರಣ್ಯೋತ್ಪನ್ನ ಪ್ರಯೋಗಾಲಯದ ಸಂಶೋಧಕ ಜುನ್ಯೊಂಗ್ ಝು ನೇತೃತ್ವದಲ್ಲಿ ಸಾಂಪ್ರದಾಯಿಕ ಗಾಜಿನ ಪರದೆಯ ಬದಲಿಗೆ ಈ ಹೊಸ ಪಾರದರ್ಶಕ ವಸ್ತುವನ್ನು ಅಭಿವೃದ್ಧಿಪಡಿಸಿದ್ದಾರೆ. ನಿರ್ಮಾಣ ಕಾಮಗಾರಿಯಲ್ಲಿ ಈ ಹೊಸ ಪಾರದರ್ಶಕ ವಸ್ತುವನ್ನು ಗಾಜಿನ ಬದಲಿಗೆ ಬಳಸಬಹುದಾಗಿದೆ.
ಗಾಜಿನ ಉತ್ಪಾದನೆಯಿಂದ ಪರಿಸರದ ಮೇಲೆ ಪ್ರತಿ ವರ್ಷವೂ 25,000 ಮೆಟ್ರಿಕ್ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್‌ನ ಹೊರೆಯಾಗುತ್ತಿರುವುದಲ್ಲದೇ ಸಾಂಪ್ರದಾಯಿಕ ಗಾಜುಗಳು ಬಹಳ ದುಬಾರಿಯೂ ಆಗಿವೆ.