ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ ಆಪಾದನೆ ಮೇಲೆ ಬಂಧಿತರಾಗಿದ್ದ ಬ್ರಿಟನ್ ಮೂಲದ 89 ಮಂದಿ ಪ್ರವಾಸಿಗರು ಜೈಲಿನಲ್ಲೇ ಪಾರ್ಟಿ ಮಾಡಿದ ವಿದ್ಯಮಾನ ಥಾಯ್ಲೆಂಡ್‌ನಲ್ಲಿ ಜರುಗಿದೆ.
22 ಮಂದಿ ಸ್ಥಳೀಯರೊಂದಿಗೆ ಈ 89 ಮಂದಿ ಇಲ್ಲಿನ ಖೋ ಪಂಗನ್ ದ್ವೀಪದಲ್ಲಿರುವ ’ಥ್ರೀ ಸಿಕ್ಸ್ಟಿ ಬಾರ್’ ಎಂಬ ಕಡಲ ತೀರದಲ್ಲಿ ಮೋಜು ಮಾಡುತ್ತಿದ್ದರು. ಪಾರ್ಟಿಯಲ್ಲಿ ಸುಮಾರು 200 ಅತಿಥಿಗಳು ಭಾಗವಹಿಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್‌ಗಳಿಂದ ಅತಿಥಿಗಳು ಆಗಮಿಸಿದ್ದರು.
ತನ್ನ ಐದನೇ ವರ್ಷಾಚರಣೆ ಆಚರಿಸುತ್ತಿದ್ದ ಬಾರ್ ಅನ್ನು ನಿಮಯ ಉಲ್ಲಂಘಿಸಿ ರಾತ್ರಿ 9 ಗಂಟೆಯ ಬಳಿಕವೂ ತೆರೆಯಲಾಗಿತ್ತು. ಅಲ್ಲದೇ ಕೋವಿಡ್ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾಗಿದ್ದ ಯಾವುದೇ ಕ್ರಮಗಳನ್ನು ಬಾರ್‌ನಲ್ಲಿ ಪಾಲಿಸುತ್ತಿರಲಿಲ್ಲ. ಬಾರ್ ಮೇಲೇ ರೇಡ್ ಮಾಡಿದ ಪೊಲೀಸರು ಅಲ್ಲಿದ್ದ ಅತಿಥಿಗಳನ್ನು ವಶಕ್ಕೆ ಪಡೆದರು. ಮದ್ಯದ ಮತ್ತಿನಲ್ಲಿದ್ದ ಈ ಪ್ರವಾಸಿಗರನ್ನು ಜೈಲಿಗೆ ಕರೆದೊಯ್ದಾಗಲೂ ಸಹ ಅವರ ಮೋಜು ಮಸ್ತಿ ಅಲ್ಲಿಗೇ ನಿಲ್ಲಲಿಲ್ಲ.
ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ
ಕೋವಿಡ್-19 ಸೋಂಕು ತಡೆಗಟ್ಟಲೆಂದು ಕಳೆದ ಏಪ್ರಿಲ್‌ನಿಂದಲೂ ಹೊಸ ನಿಯಮಾವಳಿ ತಂದಿರುವ ಥಾಯ್ಲೆಂಡ್ ಸರ್ಕಾರ, ಭಾರೀ ರಿಸ್ಕ್ ಇರುವ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆಯುವುದನ್ನು ನಿಷೇಧಿಸಿತ್ತು. ನಿಷೇಧ ಉಲ್ಲಂಘನೆ ಮಾಡಿದವರಿಗೆ 90000 ರೂ.ಗಳಷ್ಟು ದಂಡವನ್ನು ಸಹ ವಿಧಿಸುವ ಕಾನೂನು ತಂದಿದೆ ಅಲ್ಲಿನ ಸರ್ಕಾರ.