ಮನೆಯವರೆಲ್ಲರ ಮುದ್ದಿನ ಪ್ರಾಣಿಯಾಗಿದ್ದ ಆಮೆ 74 ದಿನಗಳಾದರೂ ಕಾಣದೆ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು.
ಅಮೆರಿಕಾದ ಟೆನ್ನೆಸ್ಸೀ ನಗರದ ಲಿನ್ ಕೋಲ್ ಎಂಬುವರ ಮನೆಯಲ್ಲಿ 16 ವರ್ಷದ ಆಮೆಯೊಂದನ್ನು ಹುಟ್ಟಿದಾಗಿನಿಂದ ಸಾಕಿ ಸಲಹಿದ್ದರು. ಮನೆಯ ಸದಸ್ಯರಲ್ಲಿ ಒಬ್ಬರಂತೆ ಅದನ್ನೂ ಸಾಕಿ, ಬಾಂಧವ್ಯ ಬೆಳೆಸಿಕೊಂಡಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ತೆವಳುತ್ತಾ ಮನೆಯಿಂದ ಹೊರಹೋದ ಆಮೆ, ಮನೆಯವರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ನಿಧಾನವಾಗಿ ತೆವಳಿಕೊಂಡು ಸಾಗಿದ ಆಮೆ, ಬರೋಬ್ಬರಿ 74 ದಿನಗಳಲ್ಲಿ ಸುಮಾರು 1 ಮೈಲಿ ದೂರ ಕ್ರಮಿಸಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೊನೆಗೂ ಪತ್ತೆಯಾಯಿತು. ಅಂತೂ ಕುಟುಂಬ ಸೇರಿದ ಆಮೆಯಿಂದ ಎಲ್ಲರೂ ನಿಟ್ಟುಸಿರು ಬಿಟ್ಟರು.