ಪ್ಲೋರಿಡಾ: ಪಿಜ್ಜಾ ಅಂಗಡಿಯೊಂದರ ಫ್ರಿಜ್ ನಲ್ಲಿ ಬೃಹತ್ ಉಡದ ಮೃತ ದೇಹ ಸಂಗ್ರಹಿಸಿ ಇಟ್ಟಿರುವುದು ಅಮೆರಿಕಾದಲ್ಲಿ ಪತ್ತೆಯಾಗಿದೆ.
ಫ್ಲೋರಿಡಾದ ಮಾಂಬೊದ ವೆಸ್ಟ್ ಪಾಮ್ ಫಿಜಾರಿಯಾದ ಆರೋಗ್ಯ ಇಲಾಖೆ ಇನ್ಸ್ ಪೆಕ್ಟರ್ ಮಾಮೂಲಿ ತಪಾಸಣೆ ಮಾಡುತ್ತಿರುವ ವೇಳೆ ಸಣ್ಣ ಫ್ರೀಜರ್ ನಲ್ಲಿ 36 ಕೆಜಿಯ ಉಡದ ಶವ ಪತ್ತೆಯಾಗಿದೆ.
ನಾಯಿ, ಬೆಕ್ಕುಗಳಂತೆ ಉಡವನ್ನೂ ಸಾಕುವುದು ಅಮೆರಿಕಾದಲ್ಲಿ ಸಾಮಾನ್ಯ. ಅದನ್ನು ಯಾವುದೇ ನಿರ್ಬಂಧವಿಲ್ಲದೆ, ಕಡ್ಡಾಯ ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇಟ್ಟುಕೊಳ್ಳಲು ಅವಕಾಶವಿದೆ. ಉಡವನ್ನು ಪಿಜ್ಜಾ ಅಂಗಡಿ ಮಾಲೀಕನಿಗೆ ಯಾರೋ ಉಡುಗೊರೆ ನೀಡಿದ್ದರು ಎನ್ನಲಾಗಿದೆ. ಆದರೆ, ಸತ್ತ ಉಡವನ್ನು ಇಟ್ಟಿರುವುದು ಏಕೆ ಎಂಬುದು ಅಸ್ಪಷ್ಟವಾಗಿದೆ.
ಅಂಗಡಿಯ ವ್ಯಾಪ್ತಿಯ ಹೊರಗೆ ಫ್ರೀಜರ್ ಇರಿಸಲಾಗಿತ್ತಾದರೂ. ಇದು ಅಮೆರಿಕಾದ ಆಹಾರ ಸುರಕ್ಷತಾ ಕಾಯ್ದೆಗೆ ವಿರುದ್ಧವಾಗಿದೆ. ಅಲ್ಲದೆ ಅಂಗಡಿಯಲ್ಲಿ ಸತ್ತ ಜಿರಳೆಗಳು ಕಂಡುಬಂದವು. ಒಟ್ಟಾರೆ 27 ನಿಯಮಗಳನ್ನು ಅಂಗಡಿ ಮಾಲೀಕ ಉಲ್ಲಂಘಿಸಿದ್ದು, ಇದಕ್ಕಾಗಿ ಆತನಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ವರ್ಷ ಪ್ರಾರಂಭದಲ್ಲಿ ಫ್ಲೋರಿಡಾದಲ್ಲಿ ತಾಪಮಾನ 1 ಡಿಗ್ರಿ ಸೆಲ್ಶಿಯಸ್ ಗಿಂತ ಕೆಳಗೆ ಇಳಿದ ಕಾರಣ ಸಾಕಷ್ಟು ಉಡಗಳು ಮರದಿಂದ ಬೀಳಲಾರಂಭಿಸಿ ಸುದ್ದಿಯಾಗಿದ್ದವು.