ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ ದೀಪಗಳನ್ನ ಹೊಂದಿರುವ ಮಾಸ್ಕ್ಗಳೂ ಸೇರಿವೆ.
ಯೊಕೊಹಾಮಾದಲ್ಲಿ ಟೋಕಿಯೋ ಮಾಸ್ಕ್ ಲ್ಯಾಂಡ್ ಎಂಬ ಅಂಗಡಿ ಕಳೆದ ತಿಂಗಳು ತಲೆ ಎತ್ತಿದೆ. ಇಲ್ಲಿ ಮಾಸ್ಕ್ ಮಾರಾಟ ಮಾತ್ರವಲ್ಲದೆ ಮಾಸ್ಕ್ ತಯಾರಿಸುವ ಕಾರ್ಯಾಗಾರವನ್ನೂ ಮಾಡಲಾಗುತ್ತೆ. ಜಪಾನ್ನಲ್ಲಿ ಕೊರೊನಾ ವೈರಸ್ಗೂ ಮೊದಲೇ ಮಾಸ್ಕ್ಗಳ ಬಳಕೆ ಇದೆ. ಚಳಿಗಾಲದ ಸಂದರ್ಭದಲ್ಲಿ ಇಲ್ಲಿ ಪ್ರತಿವರ್ಷವೂ ಜನರು ಮಾಸ್ಕ್ ಬಳಕೆ ಮಾಡುತ್ತಾರೆ.
ಮಾಸ್ಕ್ ಧರಿಸಿ ಎಂದು ಜಪಾನ್ನಲ್ಲಿ ಯಾವುದೇ ಕಾನೂನು ಆದೇಶ ಇಲ್ಲದೇ ಇದ್ದರೂ ಸಹ ಟೋಕಿಯೋದಲ್ಲಿ ನಿಮಗೆ ಮಾಸ್ಕ್ ಧರಿಸದೇ ಓಡಾಡುವ ಜನರು ಕಾಣಸಿಗೋದು ತುಂಬಾನೇ ಕಡಿಮೆ.