
ಬಹಳ ನಾಜೂಕಾದ ಬ್ಯಾಲೆನ್ಸಿಂಗ್ ಬೇಡುವಂಥ ಬೋರ್ಡ್ ಕ್ರೀಡೆಗಳಲ್ಲಿ ಒಂದಾದ ಸ್ಕೇಟಿಂಗ್ ಬಲು ರೋಮಾಂಚಕಾರಿ ಕ್ರೀಡೆಗಳಲ್ಲಿ ಒಂದು. ಆಸ್ಟ್ರೇಲಿಯಾದ 2 ವರ್ಷದ ಈ ಪುಟ್ಟಿಗೆ ಸ್ಟೀಟ್ ಬೋರ್ಡ್ ಸ್ಕೇಟಿಂಗ್ ಅಂದ್ರೆ ಪಂಚಪ್ರಾಣ ಎಂಬಂತಾಗಿದೆ.
ಇಲ್ಲಿನ ವಿಕ್ಟೋರಿಯಾ ಪ್ರಾಂತ್ಯದ ಕೋಕೋ ಹೆಸರಿನ ಈ ಎರಡು ವರ್ಷದ ಮುದ್ದು ಕಂದಮ್ಮ, ತನ್ನ ಸ್ಕೇಟ್ ಬೋರ್ಡ್ ಹಾಗೂ ಸ್ನೋ ಬೋರ್ಡಿಂಗ್ ಕೌಶಲ್ಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಈ ಎಳೆಯ ವಯಸ್ಸಿನಲ್ಲಿ ಬಹುತೇಕ ಮಕ್ಕಳು ಎಡವದಂತೆ ನಡೆಯಲು ಪ್ರಯತ್ನಿಸುತ್ತಿದ್ದರೆ ಇವಳು ಸಲೀಸಾಗಿ ಸ್ಕೇಟಿಂಗ್ ಮಾಡುತ್ತಿದ್ದಾಳೆ.
ಐದು ತಿಂಗಳ ಮಗುವಾಗಿದ್ದಾಗಲೇ ಮೊದಲ ಬಾರಿಗೆ ಸ್ಕೇಟ್ ಬೋರ್ಡ್ ಏರಿದ ಕೋಕೋ, ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ‘cocoskatergirl’ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ಹೊಂದಿರುವ ಕೋಕೋ ತನ್ನ ಸಾಹಸದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ.
https://www.instagram.com/p/CFvqA9SAeuQ/?utm_source=ig_web_copy_link
https://www.instagram.com/p/CE38taCgb1T/?utm_source=ig_web_copy_link
https://www.instagram.com/p/CGHjjrCAR0o/?utm_source=ig_web_copy_link