ಮೋಜು ಮಸ್ತಿಗಾಗಿ ಉದ್ಯಾನಕ್ಕೆ ಬರುವ ಜನರು ಒಂದಷ್ಟು ಕಸವನ್ನು ಅಲ್ಲೇ ಬಿಟ್ಟು ತಮಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಂತಹ ಜನರಿಗೆ ಪಾಠ ಕಲಿಸಲು ಥೈಲ್ಯಾಂಡ್ ರಾಷ್ಟ್ರೀಯ ಉದ್ಯಾನವು ಹೊಸ ಪ್ರಯೋಗ ಮಾಡಿದೆ.
ಉದ್ಯಾನವನಕ್ಕೆ ಆಗಮಿಸುವ ಸಂದರ್ಶಕರು ತಮ್ಮ ವಿಳಾಸ ನೋಂದಾಯಿಸಬೇಕು, ಬಳಿಕ ರೇಂಜರ್ ಗಳು ಅವರನ್ನು ಗಮನಿಸುತ್ತಿರುತ್ತಾರೆ. ಒಂದು ವೇಳೆ ಸಂದರ್ಶಕರು ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋದರೆ ಅವುಗಳನ್ನು ಪತ್ತೆ ಹಚ್ಚುತ್ತಾರೆ.
ಥೈಲ್ಯಾಂಡ್ ಪರಿಸರ ಖಾತೆ ಸಚಿವ ಈ ಸಂಬಂಧ ಫೋಟೋವನ್ನು ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ನಿಮ್ಮ ಕಸವನ್ನು ನಿಮಗೆ ಕಳುಹಿಸಲಾಗುವುದು ಎಂದು ಕಸದ ಸಹಿತ ಎಚ್ಚರಿಕೆ ಸಂದೇಶವಿದೆ.
ಬ್ಯಾಂಕಾಕ್ ಬಳಿಯ ಖಾವೋ ಯಾಯ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಪ್ರಯತ್ನ ಮಾಡಿದ್ದು, ಉದ್ಯಾನವನದ ಅಧಿಕಾರಿಗಳು ಬಿಟ್ಟು ಹೋದ ಕಸವನ್ನು ಸಂದರ್ಶಕರ ಮನೆಗೆ ಕಳುಹಿಸಿದ್ದಾರೆ.
https://www.facebook.com/TOPVarawut/posts/1058216911296247
https://www.facebook.com/TOPVarawut/photos/a.674770099640932/1058560754595196/?type=3