ಸಾಮಾನ್ಯವಾಗಿ ಆಫೀಸ್ಗೆ ಹೋಗೋ ಪುರುಷರು ಪ್ಯಾಂಟ್ ಶರ್ಟ್ ಹಾಕಿಕೊಂಡು ಹೋಗ್ತಾರೆ. ಆದರೆ ಇಲ್ಲೊಬ್ಬ 61 ವರ್ಷದ ವ್ಯಕ್ತಿ ಆಫೀಸ್ ಗೆ ಸ್ಕರ್ಟ್ ಹಾಗೂ ಹೈ ಹೀಲ್ಡ್ ಚಪ್ಪಲಿಗಳನ್ನ ಹಾಕಿಕೊಂಡು ಹೋಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಯಾಕೆ ಈ ರೀತಿಯ ಉಡುಗೆ ತೊಡ್ತೀರಾ ಅಂತಾ ಕೇಳಿದ್ರೆ ನಾನು ವಿವಾಹಿತ. ಜೊತೆಗೆ ಮೂವರು ಮಕ್ಕಳ ತಂದೆ. ನನಗೆ ಸುಂದರವಾದ ಹುಡುಗಿಯರ ಉಡುಗೆ ತೊಡುಗೆ ಇಷ್ಟವಾಗ್ತಿತ್ತು, ಹೀಗಾಗಿ ನಾನು ಕೂಡ ಕಳೆದ 4 ವರ್ಷಗಳಿಂದ ಈ ರೀತಿಯ ಡ್ರೆಸ್ ಹಾಕೋಕೆ ಶುರು ಮಾಡಿದೆ. ಉಡುಗೆಗಳಿಗೆ ಲಿಂಗ ಭೇದವಿಲ್ಲ. ನನಗೆ ಈ ರೀತಿಯ ಬಟ್ಟೆ ಇಷ್ಟ. ಅದಕ್ಕೆ ಹಾಕಿಕೊಂಡೆ ಅಂತಾ ಹೇಳಿದ್ರು.
ಇನ್ನು ಈ ವ್ಯಕ್ತಿಯ ಸಿಬ್ಬಂದಿ ಕೂಡ ಇವರ ಉಡುಗೆ ತೊಡುಗೆ ಕ್ರಮದ ಬಗ್ಗೆ ಯಾವುದೇ ರೀತಿಯ ಅಡ್ಡಿ ತೋರ್ಪಡಿಸಿಲ್ಲವಂತೆ. ಮನೆಯಲ್ಲಿ ಇರುವ ವೇಳೆ ಇವ್ರು ಪುರುಷರ ಬಟ್ಟೆಗಳನ್ನೇ ಧರಿಸ್ತಾರಂತೆ.