
ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ ಸ್ವಲ್ಪ ಚೇಂಜ್ ಬೇಕು ಅನ್ನುವಂತಾಗಿದೆ.
ಇಂಥ ಮಂದಿಗೆಂದು ದಿ ನೌಟಿಲಸ್ ಮಾಲ್ಡಿವ್ಸ್ ರೆಸಾರ್ಟ್ ವಿಶೇಷ ಆಫರ್ ಮುಂದಿಟ್ಟಿದೆ. ಸಮುದ್ರದ ತೀರದಲ್ಲಿ ಮಿನಿ ವರ್ಕ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ ತನ್ನ ಅತಿಥಿಗಳು ತಮಗಿಷ್ಟ ಬಂದಷ್ಟು ಹೊತ್ತು ಕೆಲಸ ಮಾಡುವುದಲ್ಲದೇ ಖಾಸಗೀ ಬೀಚ್‌ನಲ್ಲಿ ಮೀಟಿಂಗ್ ಹಮ್ಮಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಜೊತೆಗೆ ವೈಯಕ್ತಿಕ ಅಟೆಂಡೆಂಟ್, ದಿನನಿತ್ಯದ ಯೋಗಾ ಸೆಶನ್ ಹಾಗೂ ಆಹಾರ ಮತ್ತು ಪಾನೀಯಗಳನ್ನು ಒದಗಿಸಲು ಬಟ್ಲರ್ ಸೇವೆಯನ್ನೂ ಸಹ ಕೊಡಮಾಡಲಾಗಿದೆ. ಇವುಗಳ ಜೊತೆಗೆ ಅತಿಥಿಗಳು ನೀರಿನಾಳದಲ್ಲಿ ಸ್ನಾರ್ಕೆಲಿಂಗ್ ಮಾಡಿಕೊಂಡು, ಸ್ಪಾ ನಲ್ಲಿ ವಿರಮಿಸುವುದಲ್ಲದೇ, ಲಕ್ಸೂರಿ ಯಾಚ್‌ನಲ್ಲಿ ಸೂರ್ಯಾಸ್ತವನ್ನು ನೋಡಬಹುದಾಗಿದೆ. ಎಲ್ಲರಿಗೂ ಔಟ್‌ಡೋರ್ ಸಿನೆಮಾ ವ್ಯವಸ್ಥೆ ಇದ್ದು, ಜೊತೆಯಲ್ಲಿ ಬಾರ್ಬೆಕ್ಯೂ ಸಹ ಇರಲಿದೆ. ಮಕ್ಕಳಿಗೆಂದು ವಿಶೇಷ ಮನರಂಜನಾ ವಲಯವೂ ಇದೆ. ಇಷ್ಟೆಲ್ಲಾ ಐಭೋಗ ನಿಮ್ಮದಾಗಿಸಲು ಬೆಲೆ ಎಷ್ಟು ಗೊತ್ತೇ….? ಒಂದು ವಾರದ ಪ್ಯಾಕೇಜ್‌ಗೆ ಸುಮಾರು 17 ಲಕ್ಷ ರೂಗಳು…!
https://www.facebook.com/TheNautilusMaldives/photos/a.149281379079952/596039434404142/?type=3