
ಈ ಟಿಕ್ ಟಾಕ್ ಬಂದಾಗಿನಿಂದಲೂ ಚಿತ್ರವಿಚಿತ್ರ ಟ್ರೆಂಡ್ ಗಳು ಆರಂಭಗೊಂಡಿವೆ. ಈ ಸಾಲಿಗೆ ಮತ್ತೊಂದು ಸವಾಲು ಸೇರಿಕೊಂಡಿದ್ದು, ಉಪಹಾರಕ್ಕೆಂದು ಏಕದಳ ಧಾನ್ಯಗಳನ್ನು ಫ್ರೀಝರ್‌ನಲ್ಲಿ ನೆನೆಯಲು ಇಟ್ಟು, ಬೆಳಿಗ್ಗೆ ಅದಕ್ಕೆ ಹಾಲನ್ನು ಬೆರೆಸಿಕೊಂಡು ತಿನ್ನುವ ಹೊಸ ಚಾಲೆಂಜ್ ಇದು.
ಟಿಕ್ ಟಾಕ್ ಬಳಕೆದಾರ @acebking ಎಂಬಾತ ಈ ಟ್ರೆಂಡ್ ಅನ್ನು ಕಳೆದ ತಿಂಗಳು ಆರಂಭಿಸಿದ್ದು, ಅದು ತನ್ನ ಮೆಚ್ಚಿನ ಆಹಾರವೆಂದು ಹೇಳಿಕೊಂಡು ಟಿಕ್‌ಟಾಕ್‌ನಲ್ಲಿ ಹಾಕಿಕೊಂಡಾಗಿನಿಂದ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದ್ದಾನೆ.
ಸರಿ, ಇನ್ನೇನು ಬೇಕು? ನೋಡ ನೋಡುತ್ತಲೇ ಇದೂ ಒಂದು ಟ್ರೆಂಡ್ ಆಗಿದ್ದು, ಟಿಕ್‌ಟಾಕ್ ಬಳಕೆದಾರರು ಇದೇ ಕಾಂಬಿನೇಷನ್ನಿಗೆ ತಮ್ಮದೇ ಟ್ವಿಸ್ಟ್ ಕೊಟ್ಟುಕೊಂಡು, ತಂತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ಬಂದಿದ್ದಾರೆ.