ಈಜುಕೊಳದಲ್ಲಿನ ನೀರಿಗೆ 8 ತಿಂಗಳ ಹಸುಳೆಯನ್ನು ಅನಾಮತ್ತಾಗಿ ಎಸೆಯುವ ಈಕೆ, ತಾನೂ ನೀರಿಗಿಳಿದು ಆಟವಾಡಿಸುತ್ತಾಳೆ. ಇಂದೆಥಾ ಹುಚ್ಚಾಟ ಅಲ್ಲವೇ ?
ಅಷ್ಟು ಎಳೆಯ ಮಗುವನ್ನು ನೀರಿಗೆಸೆಯುವುದು ಎಂದರೇನು ? ನೀರಿನಲ್ಲಿ ಅದರೊಂದಿಗೆ ಆಟವಾಡುವುದು ಎಂದರೇನು ?
ಸಾಲದ್ದಕ್ಕೆ ಇದನ್ನು ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವುದೂ ಅಲ್ಲದೆ, ಆ ಮಗುವನ್ನು ಪುಟ್ಟ ಮೀನು ಎಂದು ಕರೆದುಕೊಂಡಿದ್ದಾಳೆ.
ಇದನ್ನು ನೋಡಿದ ಎಂಥವರಿಗೂ ಈ ಹೆಂಗಸಿಗೆ ಏನಾಗಿದೆ ? ಎಂದು ಒಂದು ಕ್ಷಣ ಅನ್ನಿಸದಿರದು.
ಟಿಕ್ ಟಾಕ್ ನಲ್ಲಿ ಈ ವಿಡಿಯೋ ವೀಕ್ಷಿಸಿದ ಅದೆಷ್ಟೋ ಹೆಂಗರಳುಗಳು ಸಂಕಟಪಟ್ಟಿದ್ದು, ಶಿಶುವನ್ನು ನೀರಿಗೆ ಬಿಸಾಡಿದ ಮಹಿಳೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂದಿದ್ದಾರೆ. ನಿನ್ನನ್ನೂ ಅದೇ ನೀರಿನಲ್ಲಿ ಮುಳುಗಿಸಿ ಬಿಡಬೇಕು ಎಂದೆಲ್ಲ ಬೈದು ಕಮೆಂಟ್ ಗಳನ್ನು ಹಾಕಿದ್ದಾರೆ.
ಆದರೆ, ಅದೊಂದು ಶಿಶು ತರಬೇತಿ ಕೇಂದ್ರ. ಅದರ ತರಬೇತುದಾರರು ಹಾಗೂ ಮಗುವಿನ ತಾಯಿ ವಿವರಿಸುವ ಪ್ರಕಾರ ಮಕ್ಕಳಿಗೆ ಎಳವೆಯಿಂದಲೇ ಇಂತಹುದನ್ನು ಕಲಿಸುವುದು ಒಳಿತು. ಸೂಕ್ತ ತರಬೇತಿ ಪಡೆದವರಿಂದ ಮಾತ್ರ. ಮಕ್ಕಳು ನೋಡ ನೋಡುತ್ತಲೇ, ಆಟವಾಡುತ್ತಲೇ ನೀರಿಗೆ ಬಿದ್ದು ಬಿಡುವ ಅಪಾಯವಿರುತ್ತದೆ. ಇದನ್ನು ತಂದೆ – ತಾಯಿ ಗಮನಿಸದೇ ಇದ್ದರೆ, ನೀರಿನಲ್ಲಿ ಬಿದ್ದಾಗ ಬದುಕುಳಿಯುವುದು ಹೇಗೆ ಎಂದು ಗೊತ್ತಿರದ ಮಕ್ಕಳು ಸತ್ತೇ ಹೋಗುತ್ತವೆ.
ಹೀಗಾಗಿ ಹಲವು ಸಮಯದಿಂದ ಈ ಶಿಶು ತರಬೇತಿ ಕೇಂದ್ರ ನಡೆಸುತ್ತಿದ್ದು, ಕೆಲವೇ ತಿಂಗಳುಗಳ ಕಂದಮ್ಮಗಳಿಗೆ ತರಬೇತಿ ನೀಡಲಾಗುತ್ತದೆ. ಇದನ್ನು ಮನೆಯಲ್ಲಿ ಯಾರೂ ಪ್ರಯತ್ನಿಸಬಾರದು. ತರಬೇತಿ ಪಡೆದವರಿಂದಲೇ ಕಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.