ಟಿಕ್ ಟಾಕ್ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಸಂಸ್ಥಾಪಕ ಜಾಂಗ್ ಯಿಮಿಂಗ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಆಸ್ತಿ ಮೌಲ್ಯ 60 ಬಿಲಿಯನ್ ಡಾಲರ್ ಆಗಿದೆ. ಬ್ಲೂಮ್ ಬರ್ಗ್ ಬಿಲಿಯನೇರ್ ಪಟ್ಟಿಯಲ್ಲಿ ಜಾಂಗ್ ಯಿಮಿಂಗ್, ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶಾನ್ ಸಮಬಲ ಸಾಧಿಸಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ ಬೈಟ್ ಡ್ಯಾನ್ಸ್ ಮೌಲ್ಯ 250 ಬಿಲಿಯನ್ ಡಾಲರ್ ಹೆಚ್ಚಾಗ್ತಿದ್ದಂತೆ ಯಿಮಿಂಗ್ ಆಸ್ತಿಯಲ್ಲಿ ಹಠಾತ್ ಏರಿಕೆಯಾಗಿದೆ. 2020ರಲ್ಲಿ ಜಾಂಗ್ ಯಿಮಿಂಗ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಟಿಕ್ ಟಾಕ್ ಅಪ್ಲಿಕೇಷನನ್ನು ಭಾರತದಲ್ಲಿ ನಿಷೇಧಿಸಲಾಯ್ತು. ಬೈಟ್ ಡ್ಯಾಸ್ ಮಾರಾಟ ಮಾಡುವಂತೆ ಟ್ರಂಪ್ ಆಡಳಿತ ಒತ್ತಡ ಹೇರಿತ್ತು.
ಈ ಎಲ್ಲ ಸಮಸ್ಯೆ ಮಧ್ಯೆಯೂ ಬೈಟ್ ಡಾನ್ಸ್ ಉತ್ತಮ ಸಾಧನೆ ಮಾಡಿದೆ. ಇಂಟರ್ನೆಟ್ ಬಳಕೆದಾರರ ಹಸಿವನ್ನು ನೀಗಿಸಿದೆ. ಬೈಟ್ ಡಾನ್ಸ್ ತನ್ನ ಸೇವೆಯನ್ನು ಇ ಕಾಮರ್ಸ್ ಹಾಗೂ ಆನ್ಲೈನ್ ಗೆ ವಿಸ್ತರಿಸಿದ ನಂತ್ರ ಅದ್ರ ಆದಾಯ 2 ಎಕ್ಸ್ ನಷ್ಟು ಹೆಚ್ಚಾಗಿದೆ. ಈಗ ಸಂಸ್ಥೆ ತನ್ನ ಕೆಲ ಸೇವೆಗಳನ್ನು ಐಪಿಒ ಮೂಲಕ ಪಟ್ಟಿ ಮಾಡಲು ಯೋಚಿಸುತ್ತಿದೆ.