ಪ್ರೀತಿಯ ಹುಡುಕಾಟದಲ್ಲಿ ಇರುವವರಿಗೆ ಡೇಟಿಂಗ್ ಅಪ್ಲಿಕೇಶನ್ಗಳು ಉತ್ತಮ ವೇದಿಕೆಗಳಾಗಿ ಬದಲಾಗುತ್ತದೆ.
ಇದೇ ರೀತಿ ಹೊಸ ಡೇಟಿಂಗ್ ಅಪ್ಲಿಕೇಶನ್ ಒಂದು ಇದೀಗ ಗ್ರಾಹಕರ ಬಳಕೆಗೆ ಲಭ್ಯವಾಗಿದ್ದು ಇದು ವಾರದಲ್ಲಿ ಕೇವಲ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಹೌದು..! ವಾರದ ಆರು ದಿನ ಅಪ್ಲಿಕೇಶನ್ ಕಾರ್ಯ ನಿರ್ವಹಿಸೋದಿಲ್ಲ.
ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಹುದ್ದೆಗಳ ನೇಮಕಾತಿ: ಇಲ್ಲಿದೆ ಮಾಹಿತಿ
ಲಂಡನ್ ಮೂಲದ ಡಿಜಿಟಲ್ ಫ್ಲಾಟ್ಫಾರಂ ಥರ್ಸ್ ಡೇ ಯನ್ನ ಲಂಡನ್ ಹಾಗೂ ನ್ಯೂಯಾರ್ಕ್ನಲ್ಲಿ ಮಾರ್ಚ್ 13ರಂದು ಲಾಂಚ್ ಮಾಡಲಾಗಿದೆ. ಈ ಅಪ್ಲಿಕೇಶನ್ ಈಗಾಗಲೇ 1.1 ಲಕ್ಷ ಬಳಕೆದಾರರನ್ನ ಹೊಂದಿದೆ. ಈ ಅಪ್ಲಿಕೇಶನ್ನ್ನು ಕೇವಲ ಗುರುವಾರ ಮಾತ್ರ ಬಳಕೆ ಮಾಡಬಹುದಾಗಿದೆ.
ಜನರು ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಅನ್ನೋದು ಸದ್ಯದ ವಾಸ್ತವವಾಗಿದೆ. ಇದರಿಂದಾಗಿ ಪ್ರೀತಿ ಪಾತ್ರರನ್ನ ಹುಡುಕೋದ್ರಲ್ಲಿ ಅವರಿಗೆ ಬೇಸರ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ನಮ್ಮ ಅಪ್ಲಿಕೇಶನ್ ಗುರುವಾರ ಮಾತ್ರ ನಿಮಗಾಗಿ ಬಾಗಿಲು ತೆರೆಯಲಿದೆ. ಅಲ್ಲದೇ ಡೇಟಿಂಗ್ ಅಪ್ಲಿಕೇಶನ್ ಹೊರತೂಪಡಿಸಿಯೂ ಜೀವನ ಇರೋದ್ರಿಂದ ಕೇವಲ ಒಂದು ದಿನ ಮಾತ್ರ ಡೇಟಿಂಗ್ ಅಪ್ಲಿಕೇಶನ್ ಸಮಯ ನೀಡಿದ್ರೆ ಸಾಕು ಎಂದು ಈ ಅಪ್ಲಿಕೇಶನ್ ಮಾಲೀಕರು ಹೇಳಿದ್ದಾರೆ.