
ಒಂದೇ ಹುಡುಗಿ ಮೇಲೆ ಸ್ನೇಹಿತರಿಬ್ಬರ ಕಣ್ಣು ಬಿತ್ತೆಂದ್ರೆ ಸ್ನೇಹ ಮುರಿದು ಬಿತ್ತು ಎಂದೇ ಅರ್ಥ. ಆದ್ರೆ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ಸಂಸಾರ ನಡೆಸುತ್ತಿದ್ದಾರೆ. ಡಿನೋ ಡಿಸೋಜ ಮತ್ತು ಸೌಲೋ ಗೋಮ್ಸ್ ಇಬ್ಬರು 2019ರಲ್ಲಿ ಬ್ರೆಜಿಲ್ ಬಾರ್ ಒಂದರಲ್ಲಿ ಓಲ್ಗಾ ಎಂಬಾಕೆಯನ್ನು ನೋಡಿದ್ರು. ಇಬ್ಬರು ಒಟ್ಟಿಗೆ ಡೇಟ್ ಗೆ ಒಲ್ಗಾಳನ್ನು ಕರೆದಿದ್ದರು.
ಈಗ ಮೂವರೂ ಫ್ರಾನ್ಸ್ ನಲ್ಲಿ ಒಟ್ಟಿಗೆ ವಾಸವಾಗಿದ್ದಾರೆ. ಇಬ್ಬರ ಸ್ನೇಹ ಮುರಿಯಲು ಮನಸ್ಸು ಮಾಡದ ಓಲ್ಗಾ ಇಬ್ಬರ ಜೊತೆ ಡೇಟ್ ಗೆ ಹೋಗಿದ್ದಳು.
ನಂತ್ರ ಮೂವರು ಪರಸ್ಪರ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದರು. ನಂತ್ರ ಒಟ್ಟಿಗೆ ವಾಸಿಸುವ ನಿರ್ಧಾರ ಕೈಗೊಂಡರು. ಮೂವರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಆದ್ರೆ ತಮ್ಮ ಇಂಟರ್ಕೋರ್ಸ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಇಬ್ಬರು ಸ್ನೇಹಿತರು ಓಲ್ಗಾ ಜೊತೆ ಸಂಬಂಧದಲ್ಲಿದ್ದಾರೆ. ಪರಸ್ಪರ ಸಂಬಂಧದಲ್ಲಿಲ್ಲ.
ಆರಂಭದಲ್ಲಿ ಇವ್ರ ಸಂಬಂಧವನ್ನು ಸ್ನೇಹಿತರು, ಕುಟುಂಬಸ್ಥರು ವಿರೋಧಿಸಿದ್ದರಂತೆ. ಆದ್ರೀಗ ಮೂವರ ಜೀವನ ನೋಡಿ ಕುಟುಂಬಸ್ಥರು ಹತ್ತಿರ ಬಂದಿದ್ದಾರಂತೆ. ಮೂವರು ಮಕ್ಕಳನ್ನು ಪಡೆಯುವ ಬಗ್ಗೆ ಈಗ ಚಿಂತನೆ ನಡೆಸುತ್ತಿದ್ದಾರೆ.