ಕೇವಲ ತೆಂಗಿನಕಾಯಿ ತಿಂದು 1 ತಿಂಗಳು ಕಾಲ ಕಳೆದ ಸಂತ್ರಸ್ತರು..! 12-02-2021 7:36AM IST / No Comments / Posted In: Latest News, International ತೆಂಗಿನಕಾಯಿಯನ್ನ ತಿಂದುಕೊಂಡು 33 ದಿನಗಳ ಕಾಲ ಬದುಕುಳಿದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯನ್ನ ಜನವಸತಿಯೇ ಇಲ್ಲದ ಬಹಾಮಸ್ ದ್ವೀಪದಿಂದ ರಕ್ಷಿಸಲಾಗಿದೆ. ಈ ಮೂವರು ಅಂಗಿಯಿಲಾ ಎಂಬಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಫೆಬ್ರವರಿ 9ನೇ ತಾರೀಖಿನಂದು ರಕ್ಷಿಸಲಾಗಿದೆ. ಕೋಬಾ ಗಾರ್ಡ್ನ ಟ್ವಿಟರ್ ಶೇರ್ ಮಾಡಿರುವ ಮಾಹಿತಿ ಪ್ರಕಾರ, ಕೋಸ್ಟ್ ಗಾರ್ಡ್ನ ವಿಮಾನವನ್ನ ನೋಡುತ್ತಿದ್ದಂತೆಯೇ ದ್ವೀಪದಲ್ಲಿದ್ದ ಮೂವರು ವಿಮಾನದ ಕಡೆ ಧ್ವಜ ಬೀಸಿದ್ದಾರೆ. ಕೋಸ್ಟ್ ಗಾರ್ಡ್ನ ಸದಸ್ಯರು ಹೆಲಿಕಾಪ್ಟರ್ನಿಂದಲೇ ಸಂತ್ರಸ್ತರಿಗೆ ಆಹಾರ ಹಾಗೂ ನೀರನ್ನ ಕಳುಹಿಸಿದ್ದಾರೆ. ಅಲ್ಲದೇ ಅವರೊಂದಿಗೆ ಸಂವಹನ ನಡೆಸಲು ಬೇಕಾಗುವ ಸಾಧನವನ್ನೂ ನೀಡಿದ್ದಾರೆ. ಫೆಬ್ರವರಿ 8ನೇ ತಾರೀಖಿನಂದೇ ಈ ಮೂವರನ್ನ ಪತ್ತೆ ಹಚ್ಚಲಾಯಿತಾದರೂ ಹವಾಮಾನ ಕೈ ಕೊಟ್ಟ ಮಾರನೇ ದಿನ ಇವರನ್ನ ರಕ್ಷಿಸಲಾಗಿದೆ ಎಂದು ಹೇಳಿದ್ರು. ದೋಣಿ ಮುಗುಚಿಬಿದ್ದ ಕಾರಣ ಈ ಗುಂಪು ನಿರ್ಜನ ಪ್ರದೇಶದಲ್ಲಿ ಸಿಲುಕಿಹಾಕಿಕೊಂಡಿದೆ. ಮೂವರು ದ್ವೀಪಕ್ಕೆ ಈಜುವಲ್ಲಿ ಯಶಸ್ವಿಯಾಗಿದ್ದು ಇಲ್ಲಿ ತೆಂಗಿನಕಾಯಿ, ಇಲಿ, ವಿವಿಧ ಚಿಪ್ಪುಗಳನ್ನ ತಿಂದು 33 ದಿನಗಳನ್ನ ದೂಡಿದ್ದಾರೆ. #UPDATE @USCG rescued the 3 Cuban nationals stranded on Anguilla Cay. A helicopter crew transferred the 2 men & 1 woman to Lower Keys Medical Center with no reported injuries. More details to follow.#D7 #USCG #Ready #Relevant #Responsive pic.twitter.com/4kX5WJJhs8 — USCGSoutheast (@USCGSoutheast) February 9, 2021