alex Certify ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ ಈ ಮಕ್ಕಳ ರೋಗ ನಿರೋಧಕ ಶಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ ಈ ಮಕ್ಕಳ ರೋಗ ನಿರೋಧಕ ಶಕ್ತಿ..!

ಕೊರೊನಾ ರೋಗದಿಂದ ವಾಸಿಯಾದ ವ್ಯಕ್ತಿಯಲ್ಲಿ ಆಂಟಿ ಬಾಡಿಗಳು ಉತ್ಪತ್ತಿಯಾಗುತ್ತೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಪಾಸಿಟಿವ್​ ಬಾರದೇ ಇದ್ದರೂ ಸಹ ಮೂವರು ಮಕ್ಕಳ ದೇಹದಲ್ಲಿ ಆಂಟಿ ಬಾಡಿ ಉತ್ಪತ್ತಿಯಾಗಿದ್ದು ವೈದ್ಯಲೋಕ ಅಚ್ಚರಿ ವ್ಯಕ್ತಪಡಿಸಿದೆ.

ಆಸ್ಟ್ರೇಲಿಯಾದ ದಂಪತಿ ಲೀಲಾ ಸಾವೆಂಕೋ ಹಾಗೂ ಟೋನಿ ಮ್ಯಾಗೈರ್​​ ತಮ್ಮ ಸ್ನೇಹಿತನ ವಿವಾಹಕ್ಕಾಗಿ ಮಾರ್ಚ್​ನಲ್ಲಿ ಅಂತರ್​ರಾಜ್ಯ ಪ್ರಯಾಣ ಬೆಳೆಸಿದ್ದರು. ಪರಿಣಾಮ ಈ ದಂಪತಿ ಕೊರೊನಾ ಸೋಂಕಿಗೆ ಒಳಗಾಗಿದ್ದರು.  ಮೂವರು ಪುಟ್ಟ ಮಕ್ಕಳನ್ನ ಹೊಂದಿದ್ದ ಈ ದಂಪತಿ ತಮಗಿಂತ ಮಕ್ಕಳ ಆರೋಗ್ಯ ಏನಾಗುತ್ತೋ ಎಂದು ಚಿಂತೆಗೆ ಒಳಗಾಗಿದ್ದರು. ಆರು, ಏಳು ಹಾಗೂ ಒಂಬತ್ತು ವರ್ಷದ ಮಕ್ಕಳಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್​ ಎಂದು ತೋರಿಸಿತ್ತು. ಕೊರೊನಾ ಸೋಂಕಿತ ಪೋಷಕರ ಜೊತೆಯೇ ಕಾಲ ಕಳೆದಿದ್ದ ಮೂವರೂ ಕೊರೊನಾ ನೆಗಟಿವ್​ ಬಂದಿದ್ದನ್ನ ಕಂಡು ಪೋಷಕರೇ ಆಶ್ವರ್ಯಗೊಳಗಾಗಿದ್ದರು.

ಮಕ್ಕಳ ಕೊರೊನಾ ವರದಿ ನೆಗೆಟಿವ್​ ಬಂದಿದ್ದರೂ ಸಹ ಪಿಸಿಆರ್​ ಟೆಸ್ಟ್​​ನಲ್ಲಿ ಮಕ್ಕಳ ದೇಹದಲ್ಲಿ ಆಂಟಿಬಾಡಿ ಉತ್ಪತ್ತಿಯಾಗಿದ್ದು ಸಂಶೋಧಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯೇ ಇದಕ್ಕೆಲ್ಲ ಕಾರಣ ಅಂತಾ ಮೆಲ್ಬೊರ್ನ್​ ವಿಶ್ವವಿದ್ಯಾಲಯದ ಶಿಶು ವೈದ್ಯ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...