
ಇಡೀ ಜಗತ್ತಿಗೆ ಕೊರೊನಾ ಸೋಂಕು ಹರಡಿದ ಚೀನಾದ ವುಹಾನ್ ಈಗ ಹೇಗಿದೆ ಗೊತ್ತೆ…? ಅಲ್ಲಿನ ಜನಜೀವನ ಹೇಗಿದೆ ಗೊತ್ತಾ…? ವುಹಾನ್ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಯಾ ಬೀಚ್ ವಾಟರ್ ಪಾರ್ಕ್ ಎಲ್ಲರನ್ನೂ ಸೆಳೆಯುತ್ತಿದೆ. ಖುಷಿಯ ದಿನಗಳು ಮರಳಿದಂತಿದೆ.
ಆದರೆ, ಖುಷಿಯಲ್ಲಿ ಕೊರೊನಾ ಮರೆತಿರುವ ಜನರು, ವಾಟರ್ ಪಾರ್ಕ್ ನಲ್ಲಿನ ಆಟೋಟಗಳಲ್ಲಿ ಎಗ್ಗಿಲ್ಲದೆ ಭಾಗಿಯಾಗುತ್ತಿದ್ದಾರೆ. ಕುಣಿದು ಕುಪ್ಪಳಿಸುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇಲ್ಲ.
ಬರೋಬ್ಬರಿ 76 ದಿನಗಳ ಕಟ್ಟುನಿಟ್ಟಿನ ಲಾಕ್ ಡೌನ್ ನಂತರ ಏಪ್ರಿಲ್ ನಿಂದ ಈಚೆಗೆ ಹಂತ-ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುತ್ತಾ ಬರಲಾಗಿತ್ತು. ಜೂನ್ ನಲ್ಲಿ ವಾಟರ್ ಪಾರ್ಕ್ ಪುನಾರಂಭ ಆಯಿತು. ಸಾಮರ್ಥ್ಯದ ಶೇ.50 ಜನರಿಗಷ್ಟೇ ಪ್ರವೇಶ, ಮಹಿಳೆಯರಿಗೆ ಶೇ.50 ರಷ್ಟು ರಿಯಾಯಿತಿ ಘೋಷಿಸಿತ್ತು.