alex Certify ಕೊರೊನಾ ಮಧ್ಯೆಯೂ ಸಲಿಂಗಕಾಮಿಗಳ ಸಂಭ್ರಮಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಸಲಿಂಗಕಾಮಿಗಳ ಸಂಭ್ರಮಾಚರಣೆ

Thousands Join Pride Parade in Taiwan as Country Remains Corona-free for Over 200 Days

ತೈವಾನ್​ ಸಲಿಂಗ ಕಾಮಿ ಹಕ್ಕುಗಳ ಆಂದೋಲನದಲ್ಲಿ ಏಷ್ಯಾ ಖಂಡದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. 2019ರ ಮೇ ತಿಂಗಳಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮೂಲಕ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.

ಈ ಸಾಧನೆ ಮಾತ್ರವಲ್ಲದೇ ಸತತ 200 ದಿನಗಳಿಂದ ಒಂದೂ ಕರೊನಾ ಕೇಸ್​ ದಾಖಲು ಮಾಡದೇ ಮತ್ತೊಂದು ರೆಕಾರ್ಡ್​ನ್ನ ಸೃಷ್ಟಿ ಮಾಡಿದೆ. ಹೀಗಾಗಿ ವಿಶ್ವದೆಲ್ಲೆಡೆ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವ ಈ ಸಂದರ್ಭದಲ್ಲಿ ತೈವಾನ್​ ದ್ವೀಪ ಮಾತ್ರ ರ್ಯಾಲಿ ನಡೆಸಿದೆ.

ಕಳೆದ ವರ್ಷ ಕಾನೂನು ಬದಲಾವಣೆ ಆದಾಗಿನಿಂದ 4000ಕ್ಕೂ ಹೆಚ್ಚು ಸಲಿಂಗ ಕಾಮಿ ದಂಪತಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ. ಕರೊನಾದಿಂದಾಗಿ ವಿಶ್ವದಾದ್ಯಂತ ಯಾವುದೇ ಸಂಭ್ರಮ ನಡೆಯದ ಈ ಸಂದರ್ಭದಲ್ಲಿ ತೈವಾನೀಸ್​ ಜನರು ವಿಶ್ವದ ಎಲ್ಲ ಸಲಿಂಗ ಕಾಮಿಗಳ ಪರವಾಗಿ ಹೆಮ್ಮೆಯ ಮೆರವಣಿಗೆ ನಡೆಸಿದ್ರು.

ಈ ವರ್ಷ ಈ ಮೆರವಣಿಗೆಯಲ್ಲಿ 130000 ಮಂದಿ ಸಲಿಂಗಕಾಮಿಗಳು ಭಾಗವಹಿಸಿದ್ದಾರೆ ಅಂತಾ ಅಂದಾಜಿಸಲಾಗಿದೆ . ಕಳೆದ ವರ್ಷ ಈ ಮೆರವಣಿಗೆಯಲ್ಲಿ 2 ಲಕ್ಷ ಸಲಿಂಗಕಾಮಿಗಳು ಭಾಗಿಯಗಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...