ಕಟ್ಟಡವೊಂದರಲ್ಲಿ ಡೋರ್ ಕೀಪಿಂಗ್ ಮಾಡುತ್ತಿದ್ದ ಜೈನ್ಸ್ ಆಂಡ್ರಡೇಸ್ ಇಂದು ನರ್ಸ್ ಪ್ರಾಕ್ಟೀಷನರ್ ಆಗಿ ಬೆಳೆಯುವ ಮೂಲಕ ತಮ್ಮ ದೃಢ ಸಂಕಲ್ಪದಿಂದ ಜನಮೆಚ್ಚುಗೆ ಗಳಿಸುತ್ತಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆಂಡ್ರಡೇಸ್ರ ಈ ಯಶೋಗಾಥೆ ಸ್ಪೂರ್ತಿಯಾಗಿದೆ. ಮಸ್ಸಾಚುಸೆಟ್ಸ್ನ ಸ್ಪ್ರಿಂಗ್ಫೀಲ್ಡ್ನ ಬಯ್ಸ್ಟಾಟೆಯಲ್ಲಿ ಜನಿಟರ್ ಆಗಿ 2010ರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಂದು ಇದೇ ಜಾಗದಲ್ಲಿ ನರ್ಸ್ ಪ್ರಾಕ್ಟಿಷನರ್ ಆಗಿ ಮರಳಿದ್ದಾರೆ
ತಾವು ಬೆಳೆದು ಬಂದ ಹಾದಿಯ ಬಗ್ಗೆ ಕಳೆದ ಸೆಪ್ಟೆಂಬರ್ನಲ್ಲಿ ಇದೇ ಆಂಡ್ರಾಡೇಸ್ ಫೇಸ್ಬುಕ್ನಲ್ಲಿ ಫೋಟೋ ಒಂದನ್ನು ಹಾಕಿದ್ದರು. ಆ ಫೋಟೋದಲ್ಲಿ ಆಂಡ್ರಾಡೇಸ್ ಜನಿಟರ್ ಆಗಿದ್ದ ದಿನದಿಂದ ನರ್ಸ್ ಪ್ರಾಕ್ಟಿಷನರ್ ಆಗಿರುವ ಗುರುತಿನ ಚೀಟಿಗಳನ್ನು ನೋಡಬಹುದಾಗಿದೆ.
https://www.facebook.com/photo.php?fbid=10217659805954347&set=p.10217659805954347&type=3