ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಚಿತ್ರವೊಂದು ಭಾರೀ ವೈರಲ್ ಆಗುತ್ತಿದೆ. ಮ್ಯಾಜೆನ್ಝೀ ಹಗ್ಗೆಟ್ ಹೆಸರಿನ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ, ಅವರು ಗಾಲ್ಫ್ ಅಂಗಳದಲ್ಲಿ ಚೆಂಡನ್ನು ಕುಳಿಗೆ ಸೇರಿಸಲು ಯತ್ನಿಸುತ್ತಿದ್ದಾರೆ.
ಆದರೆ ವಿಚಾರ ಅದಲ್ಲ. ಚೆಂಡನ್ನು ಕುಳಿಯೊಳಗೆ ಹಾಕಲು ವಿಫಲರಾದ ಕೂಡಲೇ ಅವರ ಮಗು ನಗುತ್ತಿರುವುದನ್ನು ನೋಡುವುದು ಒಂದು ರೀತಿಯ ಮಜವಾಗಿದೆ.
ಬೇಬಿ ಬ್ಯಾಸ್ಕೆಟ್‌ನಲ್ಲಿರುವ ಈ ಮಗು ತನ್ನ ಅಮ್ಮ ಗಾಲ್ಫ್ ಆಡುತ್ತಿರುವುದನ್ನು ನೋಡಿ ಎಂಜಾಯ್ ಮಾಡುತ್ತಿದೆ. ಪ್ರತಿ ಬಾರಿ ತನ್ನ ಅಮ್ಮ ಶಾಟ್ ಮಿಸ್ ಮಾಡಿಕೊಂಡಾಗೆಲ್ಲಾ ಅದರ ಕಿಲಕಿಲ ನಗು ನೋಡುವುದೇ ಬಲೇ ಮಜ ಎನ್ನುವಂತಿದೆ. ಇದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿರುವ ಮಗುವಿನ ತಂದೆಗೂ ಖುದ್ದು ನಗು ತಡೆದುಕೊಳ್ಳಲು ಆಗುತ್ತಿಲ್ಲ.
https://www.instagram.com/p/CDzwwGnJ_Lq/?utm_source=ig_embed