ಸಾಮಾನ್ಯವಾಗಿ ಕೊಚ್ಚೆಗುಂಡಿಯಲ್ಲಿ ಅಥವಾ ಕೆಸರಲ್ಲಿ ಆಟವಾಡಿದರೆ ಬೈಯುವವರೇ ಜಾಸ್ತಿ. ಆದರೆ ಇಲ್ಲೊಬ್ಬ ತಂದೆ ಹಾಗೂ ಆತನ ಪುಟ್ಟ ಪೋರಿ ಕೆಸರಲ್ಲಿ ಆಟವಾಡುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ರೆಕ್ಸ್ ಚಾಂಪ್ಮ್ಯಾನ್ ಎನ್ನುವವರು ಟ್ವೀಟರ್ನಲ್ಲಿ ಹಾಕಿಕೊಂಡಿರುವ 58 ಸೆಕೆಂಡ್ನ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಈಗಾಗಲೇ 4.3 ಮಿಲಿಯನ್ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದು, ತಂದೆ-ಮಗಳ ಈ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿರುವ ಮಗು ಪಿಂಕ್ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಹಾಕಿದ್ದು, ಕೆಸರಲ್ಲಿ ಇಳಿಯುತ್ತಿದ್ದಂತೆ ತನ್ನ ತಂದೆಯನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದೆ. ಆರಂಭದಲ್ಲಿ ಹಿಂದೇಟು ಹಾಕಿದರೂ, ಬಳಿಕ ತನ್ನ ಮಗಳಿಗಾಗಿ ಕೆಸರಲ್ಲಿ ಇಳಿಯಲು ತಂದೆ ಮುಂದಾಗಿದ್ದಾನೆ. ಬಳಿಕ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದು, ಲಕ್ಷಾಂತರ ಬಾರಿ ಈ ವಿಡಿಯೊವನ್ನು ನೋಡಬೇಕು ಎನಿಸುತ್ತದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.