ನೀರಿನಿಂದ ಬ್ಯಾಸ್ಕೆಟ್ ಬಾಲ್ ಆಟಗಾರ ಸ್ಟಾಪ್ ಮೋಷನ್ ವಿಡಿಯೊ ಮಾಡಿದ್ದು, ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೊವನ್ನು ಸಾಮಾಜಿಕ ಜಾಲತಾಣದ ಇನ್ ಫ್ಲೂಯೆನ್ಸರ್ ಸಾಮ್ಯುಯೆಲ್ ಗ್ರುಬ್ಬ್ಸ್ ಮಾಡಿದ್ದಾರೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಸಿಮೆಂಟ್ ನೆಲದ ಮೇಲೆ ಮಲಗಿದ್ದು, ಆತನ ಮೈಮೇಲೆ ಹಾಗೂ ಅಕ್ಕಪಕ್ಕ ನೀರನ್ನು ಸಿಂಪಡಿಸಲಾಗಿದೆ. ಆತನ ಕೈಯಲ್ಲಿ ಬ್ಯಾಸ್ಕೆಟ್ ಬಾಲ್ ಇದೆ. ಬಳಿಕ ಆತ ಎದ್ದು ನಿಂತರೆ ವ್ಯಕ್ತಿಯ ಆಕೃತಿ ಹಾಗೂ ಬಾಲ್ ಆಕೃತಿ ಹೊರತುಪಡಿಸಿ, ಇನ್ಜುಳಿದ ಎಲ್ಲ ಜಾಗ ನೀರಿನಿಂದ ನೆಂದು ಹೋಗಿದೆ.
ಈ ವಿಡಿಯೊ ಮಾಡಲು ಎರಡು ದಿನ ಹಿಡಿಯಿತು ಎಂದಿರುವ ಗ್ರಬ್ಬ್ಸ್ ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, 4.8 ಮಿಲಿಯನ್ ಮಂದಿ ವೀಕ್ಷಿಸಿ ಆತನ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://www.instagram.com/p/CDxIPE1AC6m/?utm_source=ig_embed