ಮದುವೆ ಆಗಲು ಪ್ರಪೋಸ್ ಮಾಡುವ ಸಾಕಷ್ಟು ರೀತಿಗಳಿವೆ. ಥರಾವರಿ ಪ್ರಪೋಸಲ್ಗಳ ನಿದರ್ಶನಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ.
ರಿಕಿ ಆಶ್ ಎಂಬ 52 ವರ್ಷದ ವೃತ್ತಿಪರ ಸ್ಟಂಟ್ಮನ್ ತನ್ನ ಮೈಮೇಲೆ ಬೆಂಕಿ ಹಾಕಿಕೊಂಡು ಪ್ರಪೋಸ್ ಮಾಡಿದ್ದಾನೆ. ಕಟ್ರಿನಾ ಡಾಬ್ಸನ್ ಹಸೆರಿನ ತನ್ನ ಮನದನ್ನೆಗೆ ಮನದಾಳದ ಮಾತುಗಳನ್ನು ಹೇಳುವ ವೇಳೆ ರಿಕಿಯ ಬೆನ್ನು ಹಾಗೂ ಕಾಲುಗಳು ಬೆಂಕಿಯಿಂದ ತುಂಬಿತ್ತು.
ಕೊರೊನಾ ವೈರಸ್ ಪೀಡಿತರ ಶುಶ್ರೂಷೆ ಮಾಡುತ್ತಿರುವ ಕಟ್ರಿನಾ, ತನ್ನ ಪ್ರಿಯಕರನ ಈ ರೀತಿಯ ಪ್ರಪೋಸಲ್ ಕಂಡು ಆರಂಭದಲ್ಲಿ ಬೆಚ್ಚಿಬಿದ್ದರೂ ಸಹ, ಸಮಚಿತ್ತವಾಗಿದ್ದುಕೊಂಡು, ಆತನನ್ನು ವರಿಸಲು ಒಪ್ಪಿಕೊಂಡಿದ್ದಾರೆ.