alex Certify ಸದಾ ಬೇಸರದಲ್ಲಿರುವಂತೆ ಕಾಣುತ್ತಿದ್ದ ಕಾರಣಕ್ಕೆ ಫೇಮಸ್‌ ಆಗಿತ್ತು ಈ ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಬೇಸರದಲ್ಲಿರುವಂತೆ ಕಾಣುತ್ತಿದ್ದ ಕಾರಣಕ್ಕೆ ಫೇಮಸ್‌ ಆಗಿತ್ತು ಈ ಬೆಕ್ಕು

ಒಂದೊಂದು ಬೆಕ್ಕಿನ ಕಥೆ ಒಂದೊಂದಾಗಿರುತ್ತದೆ. ಆದರೆ ಈ ಬೆಕ್ಕು ವಿಶ್ವವಿಖ್ಯಾತಿ ಪಡೆದಿದ್ದು ಒಂದೇ ಕಾರಣಕ್ಕೆ, ಅದೆಂದರೆ ಆ ಬೆಕ್ಕಿನ ಬೇಸರದ ಮುಖಕ್ಕೆ.

ಹೌದು, ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿರುವ ಗ್ರೂಪಿ ಕ್ಯಾಟ್ 2019ರ ಮೇನಲ್ಲಿ ಕೊನೆಯುಸಿರು ಎಳೆಯಿತು. ಆದರೆ ಅದಕ್ಕೂ ಮೊದಲು ತನ್ನ ಬೇಸರದ ಮೊಗದೊಂದಿಗೆ ಇಡೀ ವಿಶ್ವಕ್ಕೆ ಪರಿಚಯವಾಗಿತ್ತು.

ಟಾರ್ಡರ್ ಸಾಸ್ ಎನ್ನುವ ಹೆಸರಲ್ಲಿ ವೈರಲ್ ಆದ ಈ ಬೆಕ್ಕು ಮೊದಲು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು 2012ರಲ್ಲಿ. ಕೇವಲ 5 ತಿಂಗಳು ಇದ್ದಾಗ ಅದರ ಮಾಲೀಕರು ಈ ಬೆಕ್ಕಿನ ಮೊದಲ‌ ಬೇಸರ ಫೋಟೋವನ್ನು ಹಾಕಿದರು. ಬಳಿಕ ಇದರ ಪ್ರತಿ ಫೋಟೋ ಬೇಸರದ ಮುಖದಲ್ಲಿರುವಂತೆ ಇದಿದ್ದರಿಂದ ಇದನ್ನು ಶಾಶ್ವತ ಬೇಸರದಲ್ಲಿರುವ ಬೆಕ್ಕು ಎಂದೇ ಹೇಳಲಾಯಿತು.

ಟ್ವೀಟರ್‌ನಲ್ಲಿ 1.53 ಮಿಲಿಯನ್ ಫಾಲೋವರ್ಸ್ ನ್ನು ಹೊಂದಿದೆ. ಈ ಬೆಕ್ಕು ಸತ್ತು ವರ್ಷ ಕಳೆದರೂ ನೆಟ್ಟಿಗರು ಈಗಲೂ ಈ ಬೆಕ್ಕನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮುಖದ ಮೇಲಿನ ಮಾರ್ಕ್‌ಗಳಿಂದ ಅದು ಆ ರೀತಿ ಕಾಣುತ್ತಿತ್ತು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...