ಕೊರೊನಾ ವೈರಸ್ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ.
ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ಗಳನ್ನ ಧರಿಸಬೇಕಾಗುತ್ತೆ. ಈ ಪಿಪಿಇ ಕಿಟ್ಗಳನ್ನ ದಿನಂಪೂರ್ತಿ ಧರಿಸೋದು ಅಂದರೆ ಸುಲಭದ ಮಾತಲ್ಲ.
ಅಮೆರಿಕದ ಟೆನ್ನೆಸ್ಸಿಯದ ನರ್ಸ್ ಒಬ್ಬರು 8 ತಿಂಗಳುಗಳ ಕಾಲ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಇದೀಗ ತಮ್ಮ 8 ತಿಂಗಳ ಹಿಂದಿನ ಫೋಟೋ ಹಾಗೂ ಈಗಿನ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನರ್ಸ್ನ ಮುಖದಲ್ಲಾದ ಬದಲಾವಣೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.